ಪೆರಿಂಜೆ: ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.8 ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಸುಧಾಕರ ಪಿ. ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಆರ್ಥಿಕ ವರ್ಷದಲ್ಲಿ ಸಂಘ ನಿವ್ವಳ ರೂ.3,60,178/ ಲಾಭ ಗಳಿಸಿದ್ದು ಇದರಲ್ಲಿ ಶೇ.65 ಸದಸ್ಯರಿಗೆ ಬೋನಸ್ ಘೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್, ದ.ಕ.ಹಾಲು ಒಕ್ಕೂಟದ ಬೆಳ್ತಂಗಡಿ ವಿಸ್ತರಣಾಧಿಕಾರಿ ಸುಚಿತ್ರಾ, ದ.ಕ.ಹಾಲು ಒಕ್ಕೂಟದ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ.ಪೂಜಾ, ನಿರ್ದೇಶಕರುಗಳಾದ ಎನ್.ಸೀತಾರಾಮ ರೈ, ವಿಠ್ಠಲ ಸಿ.ಪೂಜಾರಿ, ಆನಂದ ಬಂಗೇರ, ಪಿ.ಧರಣೇಂದ್ರ ಕುಮಾರ್, ಸತೀಶ್ ಶೆಟ್ಟಿ, ಕೇಶವ, ದೀಕಯ್ಯ, ಅನಿಲ್, ವನಜ, ಲಕ್ಷ್ಮೀ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಆನಂದ ಕುಲಾಲ್ ಸ್ವಾಗತಿಸಿ, ನಿರ್ದೇಶಕ ಕರುಣಾಕರ ವಂದಿಸಿದರು.ಕಾರ್ಯದರ್ಶಿ ನಾಗೇಶ್ ಪೂಜಾರಿ ಬಿ.ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.