ಬೆಳ್ತಂಗಡಿ: ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವ್ಯಾಪ್ತಿಯ ಶಿವಾನಿ ಉತ್ಪಾದಕರ ಗುಂಪಿನ ಸದಸ್ಯರು ಉತ್ಪಾದಿಸಿದ ಶಿವಾನಿ ಶುದ್ದ ಕೊಬ್ಬರಿ ಎಣ್ಞೆಯನ್ನು ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಪ್ರತಿಮಾ, ಉತ್ಪಾದಕ ಗುಂಪಿನ ಸದಸ್ಯರಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರು ವೀಣಾಶ್ರೀ ,ಒಕ್ಕೂಟದ ಪದಾಧಿಕಾರಿ ಮತ್ತು ಸದಸ್ಯರು, ಎಂಬಿಕೆ ರೇವತಿ ,ಎಲ್ ಸಿ ಆರ್ ಪಿ, ಸಖಿಗಳು, ಉತ್ಪಾದಕ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.