Site icon Suddi Belthangady

ಉಜಿರೆಯಲ್ಲಿ ಅರ್ಪಿತ್ ಹೇರ್ ಸ್ಟುಡಿಯೋ ಶುಭಾರಂಭ

ಉಜಿರೆ: ಉಜಿರೆಯಲ್ಲಿ ಅರ್ಪಿತ್ ಭಂಡಾರಿ ಇವರ ಮಾಲೀಕತ್ವದ ಆಧುನಿಕ ತಂತ್ರಜ್ಞಾನಗಳೊಂದಿಗೆ ಅನುಭವಿ ವೃತ್ತಿಪರರು ನಡೆಸುವ ಅರ್ಪಿತ್ ಹೇರ್ ಸ್ಟುಡಿಯೋ ಸಂಸ್ಥೆ ಉಜಿರೆಯಲ್ಲಿ ಶುಭಾರಂಭಗೊಂಡಿದೆ.ವಿವಿಧ ವಿನ್ಯಾಸದ ಮೂಲಕ ಜನರ ಗಮನ ಸೆಳೆಯುವ ಈ ಸಂಸ್ಥೆ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ನೀಡಿದೆ.

ಸೆಪ್ಟೆಂಬರ್ 8ರಂದು ಸ್ವಪ್ನ ಹೋಟೆಲ್ ಬಳಿ ಇರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ನಿರ್ಮಿಸಿದ ಅರ್ಪಿತ್ ಹೇರ್ ಸ್ಟುಡಿಯೋ (AHS)ಪ್ರೊಫೆಷನಲ್ ಯೂನಿಸೆಕ್ಸ್ ಹೇರ್ ಸಲೂನ್ ಶುಭಾರಂಭಗೊಂಡಿತು.

ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಗಿರೀಶ್ ಕುದ್ರೆಂತ್ತಾಯ ಶಿವ ಪಾರ್ವತಿ ಕೃಪಾ ಧರ್ಮಸ್ಥಳ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್ ಹಾಗೂ ದೀಪಿಕಾ ಇವರು ಗಮನಸೆಳೆದರು.

ಮುಖ್ಯ ಅತಿಥಿಗಳಾಗಿ ಧನರಾಜ್ ಪೋಲಿಸ್ ಉಪನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ಭಾಗವಹಿಸಿದ್ದರು.ಶೇಖರ್ ಭಂಡಾರಿ, ವಿನೋದ, ಅಭಿಜಿತ್ ಭಂಡಾರಿ, ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಅರ್ಪಿತ್ ಭಂಡಾರಿ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.

Exit mobile version