Site icon Suddi Belthangady

ನೆರಿಯ: ಅನಾರೋಗ್ಯ ಪೀಡಿತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರ್ಥಿಕ ನೆರವು

ನೆರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರಿಯ ವಲಯದ ಬೈಲಂಗಡಿ ಕಾರ್ಯಕ್ಷೇತ್ರದ ಗಾನದಕೊಟ್ಟಿಗೆ ಎಂಬಲ್ಲಿ ವಾಸವಾಗಿರುವ ಗುಲಾಬಿಯವರು ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದು ತೀವ್ರ ಅನಾರೋಗ್ಯ ಪೀಡಿತರಾಗಿದ್ದು, ಅವರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾದ 40,000ರೂ ಮೊತ್ತದ ಆರ್ಥಿಕ ಸಹಾಯವನ್ನು ಅವರ ತಾಯಿ ಸುನಂದಾರವರಿಗೆ ಹಸ್ತಾಂತರಿಸಲಾಯಿತು.

ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎ.ರಹಿಮಾನ್, ಬೈಲಂಗಡಿ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಮಲಾಕ್ಷ ಪಾದೆ, ಜನಜಾಗೃತಿ ವಲಯ ಸಮಿತಿ ಮಾಜಿ ಅಧ್ಯಕ್ಷ ಅಶೋಕ್ ಜೈನ್, ಪದಾಧಿಕಾರಿ ಒಬಯ್ಯ ಗೌಡ, ವಲಯ ಮೇಲ್ವಿಚಾರಕ ರಾಜೇಶ್ ಉಪಸ್ಥಿತರಿದ್ದರು.

Exit mobile version