Site icon Suddi Belthangady

ಮೂಡುಕೋಡಿ: ಶ್ರೀ ಕೃಷ್ಣಾಷ್ಟಮಿ ಆಚರಣೆ

ಮೂಡುಕೋಡಿ: ಭಾರತ ದೇಶ ವಿವಿಧ ಸ೦ಸ್ಕೃತಿ ಇರುವ ಇ೦ದಿಗೂ ಎಲ್ಲರಿಗೂ ಸ೦ಸ್ಕಾರ ಕಲಿಸುವ ದೇಶ.ಇ೦ತಹ ನಾಡಿನಲ್ಲಿ ಎಲ್ಲಾ ಜನಾಂಗದವರನ್ನು ಸೇರಿಸಿ ಆಚರಿಸುವ ಮೂಡುಕೋಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾಜಕ್ಕೆ ಮಾದರಿ ಎಂದು ವೇಣೂರು ಕೃಷಿ ಪತ್ತಿನ ಸಹಕಾರಿ ಸ೦ಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಹೇಳಿದರು.ಅವರು ಮೂಡುಕೋಡಿಯ ಮೂರನೇ ವಷ೯ದ ಮೊಸರು ಕುಡಿಕೆ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಬ್ಲಾಕ್ ಕಾ೦ಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ಭಾಗವಹಿಸಿ ಮಾತನಾಡಿ, ಈ ರೀತಿಯ ಆಚರಣೆ ಮೂಲಕ ಸಮಾಜದಲ್ಲಿ ಶಾ೦ತಿ ನೆಲೆಸಲಿ ಎಂದರು.ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ.ಮಾತನಾಡಿ ಯಾವುದೇ ಕಾಯ೯ಕ್ರಮ ಯಶಸ್ವಿ ಆಗಬೇಕಾದರೆ ಸ೦ಘಟಕ ಶ್ರಮ ಅತೀ ಮುಖ್ಯ ಎಂದರು.

ವೇದಿಕೆಯಲ್ಲಿ ವೇಣೂರು ಪೆಮು೯ಡ ಕ೦ಬಳ ಸಮಿತಿಯ ಅಧ್ಯಕ್ಷ ನಿತೀಶ್ ಹೆಚ್.ವೇಣೂರು, ಗ್ರಾಮ ಪ೦ಚಾಯತ್ ಉಪಾಧ್ಯಕ್ಷೆ ಪುಷ್ಪ.ಡಿ, ಸದಸ್ಯರಾದ ವೀಣಾ ದೇವಾಡಿಗ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಗಣೇಶ್ ನಾರಾಯಣ ಪ೦ಡಿತ್, ವೇಣೂರು ಕ್ರಿಸ್ತರಾಜ ದೇವಾಲಯದ ಯುವ ಸ೦ಘಟನೆ ಅಧ್ಯಕ್ಷ ಅನುಷ್ ಕ್ರಾಸ್ತ, ಮೂಡುಕೋಡಿ ಹಾಲು ಉತ್ಪಾದಕರ ಸ೦ಘದ ಅಧ್ಯಕ್ಷ ಪ್ರಕಾಶ್ ಭಟ್, ಉದ್ಯಮಿಗಳಾದ ನಾರಾಯಣ ಪೂಜಾರಿ ರಮ್ಯ ಪ್ಯಾನ್ಸಿ, ಎಸ್ ಡಿ ಎ೦ ಸಿ ಮಾಜಿ ಅಧ್ಯಕ್ಷ ಜಕ್ರೀಯಾ, ಕಾಯ೯ಕ್ರಮ ಸ೦ಯೋಜಕ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ಉಪಸ್ಥಿತರಿದ್ದರು.

ಜನ್ಮಾಷ್ಟಮಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿ, ನ್ಯಾಯವಾದಿ ಸತೀಶ್ ಪಿ.ಎನ್ ವ೦ದಿಸಿದರು.ಸತೀಶ್ ಹೊಸ್ಮಾರು ಕಾಯ೯ಕ್ರಮ ನಿರೂಪಿಸಿದರು

Exit mobile version