Site icon Suddi Belthangady

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪೆರಿಂಜೆ ಸ.ಹಿ.ಪ್ರಾ.ಶಾಲೆಗೆ ಸಮಗ್ರ ಪ್ರಶಸ್ತಿ

ಪೆರಿಂಜೆ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಥಮ ಸ್ಥಾನ: ರಕ್ಷಾ…ಕಥೆ, ಪ್ರಾಪ್ತಿ..ಅಭಿನಯ ಗೀತೆ, ಮಹಮ್ಮದ್ ಸಲೀಂ… ಧಾರ್ಮಿಕ ಪಠಣ, ಹುದಾ ಮರ್ಯಮ್…ಇಂಗ್ಲೀಷ್ ಕಂಠಪಾಠ, ಅಕ್ಷತಾ….ಲಘು ಸಂಗೀತ, ಸಾನ್ವಿ… ಭಕ್ತಿಗೀತೆ, ಅಶ್ವಿತಾ…. ಕನ್ನಡ ಕಂಠಪಾಠ, ಅಕ್ಷಿತ್…. ಛದ್ಮವೇಷ,

ದ್ವಿತೀಯ ಸ್ಥಾನ: ಹುದಾ ಮರ್ಯಮ್… ಆಶುಭಾಷಣ, ಅಶ್ವಿತಾ….ಕಥೆ, ಪ್ರಾಪ್ತಿ…ಲಘು ಸಂಗೀತ, ರಶ್ಮಿತಾ….ಹಿಂದಿ ಕಂಠಪಾಠ, ಶರತ್…ಮಿಮಿಕ್ರಿ, ತನುಷ್…. ಧಾರ್ಮಿಕ ಪಠಣ, ವಿನಿತ್…. ಚಿತ್ರಕಲೆ, ಭುವನ್….ಕ್ಲೇ ಮಾಡೆಲಿಂಗ್,

ತೃತೀಯ ಸ್ಥಾನ: ಶಶಾಂಕ್….ಕ್ಲೇ ಮಾಡೆಲಿಂಗ್, ಹಸನ್ ಸಹದ್…. ಧಾರ್ಮಿಕ ಪಠಣ, ವರ್ಷಿತ್….. ಛದ್ಮವೇಷ, ಲಿಖಿತ್…. ಆಶುಭಾಷಣ, ಪ್ರಶ್ಮಾ….ಅಭಿನಯ ಗೀತೆ, ರಜತ್…. ಚಿತ್ರಕಲೆ, ತನುಷ್…. ಭಕ್ತಿಗೀತೆ, ಸಮೀಕ್ಷಾ.. ಧಾರ್ಮಿಕ ಪಠಣ, ಅಕ್ಷತಾ…. ಕನ್ನಡ ಕಂಠಪಾಠ

Exit mobile version