Site icon Suddi Belthangady

ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳಲಿರುವ ನೂತನ ಗೃಹ ನಿರ್ಮಾಣಕ್ಕೆ ಶಿಲಾನ್ಯಾಸ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ಗೆ ಸೇರಿದ ಕುಟುಂಬಕ್ಕೆ ಉಜಿರೆ ಸಂತ ಅಂತೋನಿ ಚರ್ಚ್ ಹಾಗೂ ಸಿಒಡಿಪಿ ಮಂಗಳೂರು ಹಾಗೂ ದಾನಿಗಳ ಸಹಕಾರದಲ್ಲಿ ಕಲ್ಮಂಜ ಗ್ರಾಮದ ಅಸಿಸಿ ವಾರ್ಡ್ ನಲ್ಲಿ ವಾಸವಿರುವ ಫ್ರಾನ್ಸಿಸ್ ಡಿಸೋಜರವರ ಕುಟುಂಬಕ್ಕೆ ನೂತನ ಗೃಹ ನಿರ್ಮಾಣದ ಯೋಜನಾಕ್ಕೆ ಸೆ. 6ರಂದು ಚರ್ಚ್ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಉಜಿರೆ ಅನುಗ್ರಹ ಕಾಲೇಜಿನ ಪ್ರಿನ್ಸಿಪಾಲ್ ವ.ಫಾ.ವಿಜಯ್ ಲೋಬೊ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.ಕಾರ್ಯಾಕ್ರಮದಲ್ಲಿ ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ವಾಳೆಯ ಗುರಿ ಕಾರ್ ಸೋನಾಲ್ ಪಿರೇರಾ, ಪ್ರತಿನಿಧಿ ಗ್ರೇಸಿ, ಆರ್ಥಿಕ ಸಮಿತಿ ಸದಸ್ಯರುಗಳಾದ ಅರುಣ್ ಡಿಸೋಜ, ಮನೋಜ್ ಮಿನೇಜಸ್, ಎಸ್.ವಿ.ಪಿ ಉಜಿರೆ ಘಟಕದ ಅಧ್ಯಕ್ಷ ರಿಚರ್ಡ್ ಡಿಸೋಜ, ವಿಲಿಯಂ ಡಿಸೋಜ, ಕಂಟ್ರಾಕ್ಟರ್ ವಲೇರಿಯನ್ ಪಿಂಟೋ, ಕೆಥೊಲಿಕ್ ಸಭಾ ಉಜಿರೆ ಘಟಾಕದ ಅಧ್ಯಕ್ಷ ಸ್ಟ್ಯಾನಿ ಪಿಂಟೋ, ಆಯೋಗಾದ ಕಾರ್ಯದರ್ಶಿ ರೋಬರ್ಟ್ ಡಿಸೋಜ, ಧರ್ಮಭಗಿನಿ ಸಿಸ್ಟರ್ ಮೊಂತಿ ಫೆರ್ನಾಂಡಿಸ್, ವೆಲಂಕಣಿ ಕ್ಯಾಟರಿಂಗ್ ಮಾಲಕ ಲ್ಯಾನ್ಸಿ ಮೋನಿಸ್, ಫಲಾನುಭವಿ ಫ್ರಾನ್ಸಿಸ್ ಡಿಸೋಜ ಮತ್ತು ಕುಟುಂಬ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿ ಸಾನ್ ಸ್ವಾಗತಿಸಿ ಲಿಗೋರಿ ವಾಸ್ ವಂದಿಸಿದರು.

Exit mobile version