ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನ ಮಾಯ ಬೆಳಾಲು ಇಲ್ಲಿ 2024ನೇ ಸಾಲಿನ 7ನೇ ವರ್ಷದ ವರಮಹಾಲಕ್ಷ್ಮಿ ವೃತಾ ಪೂಜೆಯ ನೂತನ ಸಮಿತಿಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಲಲಿತ ಮೋನಪ್ಪ ಗೌಡ ಪನ್ನಾಜೆ, ಕಾರ್ಯದರ್ಶಿಯಾಗಿ ಮಮತಾ ಬೆಳಿಯಪ್ಪ ಗೌಡ ಎಂಜಿರಿಗೆ, ಕೋಶಾಧಿಕಾರಿಯಾಗಿ ಕನ್ನಿಕಾ ಪದ್ಮ ಗೌಡ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಸುಕನ್ಯಾ ನಾರಾಯಣ ಸುವರ್ಣ ಮಂಜನೊಟ್ಟು, ನಿಕಟ ಪೂರ್ವ ಅಧ್ಯಕ್ಷರಾಗಿ ಶೀಲಾವತಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು, ಉಪಾಧ್ಯಕ್ಷರಾಗಿ ಕುಮಾರಿ ಸುರೇಖಾ ಎಂ.ಕೆ. ಬೆರ್ಕೆಜಾಲು, ಜೊತೆ ಕಾರ್ಯದರ್ಶಿಯಾಗಿ ಶೀಲಾವತಿ ವಸಂತ ಪಲ್ಲಿದಡ್ಕ, ಸಂಚಾಲಕರಾಗಿ ಪ್ರಭಾವತಿ ಗಾಂಧಿನಗರ, ಭಾರತಿ ಕೇಶವ ಗೌಡ ಮಾರ್ಪಾಲು ಹಾಗೂ ಸದಸ್ಯರಾಗಿ ಕುಶಲ ಹಿಪ್ಪ, ಮಲ್ಲಿಕಾ ಅಮುಂಜಿ, ಉಷಾ ಮಾರ್ಪಾಲು, ದಿವ್ಯ ಪೊಯ್ಯದಡ್ಡ, ಶ್ವೇತ ಮಾರ್ಪಾಲು, ಚರಿತ್ರ ಮುಂಡ್ರೋಟ್ಟು, ಸುಜಾತ ಮಾಯ, ಮೋಹಿನಿ ಎರ್ಮಲ, ಪ್ರಭಾವತಿ ಅಂಗಡಿಬೆಟ್ಟು, ಪುಷ್ಪ ಬಜಕಲ, ಸುಶ್ಮಿತಾ ನಾಗಕಲ್ಲು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ಪದ್ಮ ಗೌಡ , ಸದಸ್ಯರಾದ ಶಿವಕುಮಾರ್ ಬಾರಿತಾಯ, ಪುಷ್ಪದಂತ ಜೈನ್, ರಾಜಪ್ಪ ಗೌಡ, ಗಂಗಯ್ಯಗೌಡ, ನಾಣ್ಯಪ್ಪ ಪೂಜಾರಿ, ದಿನೇಶ್ ಎಂ.ಕೆ, ಹಾಗೂ ಊರಿನ ಗಣ್ಯರಾದ ಧರ್ಮೇಂದ್ರ ಗೌಡ, ಲಕ್ಷ್ಮಣಗೌಡ ಪುಳಿತ್ತಡಿ, ಶೇಖರ ಗೌಡ ಕೊಲ್ಲಿಮಾರು ಉಪಸ್ಥಿತರಿದ್ದರು.