Site icon Suddi Belthangady

ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿ ಸಮಾರಂಭ-ಯುವ ಶಕ್ತಿಯು ದೇಶದ ಬಹು ದೊಡ್ಡ ಶಕ್ತಿಯಾಗಿದೆ- ಡಾ.ಎಸ್.ಸತೀಶ್ಚ್ಂದ್ರ

ಉಜಿರೆ: ಯುವ ಶಕ್ತಿ ಎಂಬುದು ದೊಡ್ಡ ಪ್ರವಾಹ ಇದ್ದ ಹಾಗೆ, ಪ್ರವಾಹವು ಪ್ರಖರವಾದ ವೇಗದಿಂದ ಕೂಡಿರುತ್ತದೆ.ಈ ಜಲರಾಶಿಗೆ ಅದರ ಪಾಡಿಗೆ ಅದನ್ನು ಬಿಟ್ಟರೆ ಅನೇಕ ನಾಶ ನಷ್ಟ ಗಳನ್ನು ಉಂಟು ಮಾಡಿ ಸಮುದ್ರ ಸೇರುತ್ತದೆ, ಆದರೆ ಆ ನೀರನ್ನು ಅಣೆಕಟ್ಟು ಕಟ್ಟಿ ಅದನ್ನು ನೀರಾವರಿಗೆ ಬಳಸಿಕೊಳ್ಳಲು ಅವಕಾಶ ಇದೆ.ಅದರಂತೆ ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರಿಂದ ಕೂಡ ದೇಶಕ್ಕೆ ಪ್ರಯೋಜನವಿದೆ.

ಜ್ಞಾನ, ಕೌಶಲ್ಯ, ದೋರಣೆ ಮತ್ತು ಮೌಲ್ಯಗಳನ್ನು ಯುವಜನರಿಗೆ ನೀಡಬೇಕು. ಅದರಂತೆ ರುಡ್ಸೆಟ್ ಸಂಸ್ಥೆಯ ಎಲ್ಲಾ ತರಬೇತಿಗಳಲ್ಲಿ ಈ ವಿಷಯಗಳನ್ನು ನೀಡಲಾಗುತ್ತದೆ, ಅವಕಾಶಗಳನ್ನು ಬಾಚಿಕೊಳ್ಳಬೇಕು ಅದರ ಜೊತೆಗೆ ಅವಕಾಶಗಳನ್ನು ನಾವೇ ಸೃಷ್ಠಿಸಬೇಕು, ಉನ್ನತ ಶಿಕ್ಷಣವನ್ನು ಪಡೆದು ಜೀವನದಲ್ಲಿ ನೆಲೆ ನಿಲ್ಲಲು ಸಾದ್ಯ ಇಲ್ಲದೇ ಇರಬಹುದು ಆದರೆ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದ ಯುವ ಜನತೆ ಸ್ವಾವಲಂಬಿಗಳಾಗಿ ಬಾಳುತ್ತಾರೆ ಎಂದು ಎಸ್.ಡಿ.ಎಮ್ ಏಜುಕೇಷನಲ್ ಸೊಸೈಟಿಯ ಕಾರ್ಯದರ್ಶಿಯಾದ ಡಾ. ಎಸ್. ಸತೀಶ್ಚ್ಂದ್ರ ಅವರು ಅಭಿಪ್ರಾಯ ಪಟ್ಟರು.

ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು.

ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರೆ, ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ವರು ಧನ್ಯವಾದವಿತ್ತರು.ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ ೩೫ ಶಿಭಿರಾರ್ಥಿಗಳ ಜೊತೆಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಬ್ಯೂಟಿ ಪಾರ್ಲರ್ ಮತ್ತು ಕಂಪ್ಯೂಟರ್ ಟ್ಯಾಲಿ ತರಬೇತಿಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Exit mobile version