ನಾಳ: ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಚಿಕ್ಕ ಮೇಳದ ಪ್ರದರ್ಶನ ಕಾಲಮಿತಿ ಯಕ್ಷಗಾನ ಇತ್ತೀಚೆಗೆ ಕಳಿಯ, ನ್ಯಾಯತರ್ಪು ಹಾಗೂ ನೆರೆಯ ಗ್ರಾಮಗಳಲ್ಲಿ ಸಂಚರಿಸುವ ಜೊತೆಗೆ ಸಂಜೆ 6 ರಿಂದ ರಾತ್ರಿ 10.30 ರವರೆಗೆ ಅಂದಾಜು 20 ರಿಂದ 25 ಮನೆಗಳಿಗೆ ಭೇಟಿ ನೀಡಿ ಪೌರಣಿಕ ಕಥೆಗಳನ್ನು ಯಕ್ಷಗಾನದ ಮೂಲಕ ನಡೆಸಿ ಕೊಡುತ್ತಾರೆ.
ಯಕ್ಷಗಾನ ಎಂಬುದು ಸಂಗೀತ, ನೃತ್ಯ, ಮುಂತಾದ ಸಾಹಿತ್ಯ ಗಳನ್ನೊಳಗೊಂಡ ಅದ್ಭುತ ಕಲಾ ಪ್ರಕಾರ.ದೇವರಿಗೆ ಅತ್ಯಂತ ಪ್ರಿಯವಾದ ಬೆಳಕಿನ ಸೇವೆ ಯಕ್ಷಗಾನದಲ್ಲಿ ಉಪಯೋಗಿಸಲ್ಪಡುವ ಚೃಂಜೆ,ಮದ್ದಳೆ ಹಾಗೂ ಇನ್ನಿತರ ಪರಿಕರಗಳ ನಾದ ದಿಂದಾಗಿ ಅಗೋಚರ ದುಷ್ಟ ಶಕ್ತಿಗಳು ಮನೆಯ ಪರಿಸರದಲ್ಲಿ ಸುಲಿದಾಡುವುದಿಲ್ಲ ಎಂದು ನಂಬಲಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯರು ಪ್ರಾರಂಭಿಸಿದ “ಚಿಕ್ಕ ಮೇಳ” ಮಳೆಗಾಲದಲ್ಲಿ ಅಂದರೆ ಜೂ.17 ರಂದು ಪ್ರಾರಂಭವಾಗಿ ದೀಪಾವಳಿ ಹಬ್ಬದ ತನಕ ಮನೆಮನೆಗೆ ಭೇಟಿ ನೀಡಿ ಯಕ್ಷಗಾನ ಸೇವೆ ನೀಡುತ್ತಾರೆ.
ಮೇಳದ ಸಂಚಾಲಕರಾದ ರಾಘವ ಹೆಚ್. ನೇತೃತ್ವದಲ್ಲಿ ಭಾಗವತರಾಗಿ ಜಗದೀಶ್ ಚಾರ್ಮಾಡಿ, ಮದ್ದಳೆ ಗಣೇಶ್ ಕಾರಂತ್, ಸ್ತ್ರೀ ವೇಷಧಾರಿ ಹರೀಶ್ ಕುಮಾರ್ ಬೆಳ್ಳಾರೆ, ಶ್ರೀ ಕೃಷ್ಣ ವೇಷಧಾರಿಯಾಗಿ ಕುಸುಮಾಧರ ಕುಲಾಲ್ ಕನ್ನಡಿಕಟ್ಚೆ, ವಾಹನ ಚಾಲಕರಾಗಿ ಓಬಯ್ಯ ಗೌಡ ಹಾಕೋಟೆ ಕಾರ್ಯ ನಿವಾಹಿಸುತ್ತಿದ್ದಾರೆ.