ಉಜಿರೆ: ಸೇವಾಭಾರತಿ(ರಿ) ಬೆಳ್ತಂಗಡಿ-ಸೇವಾಧಾಮ ಇದರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಎಸ್.ಡಿ.ಎಂ ಕಾಲೇಜು ಉಜಿರೆ ಇದರ ಸಹಯೋಗದೊಂದಿಗೆ ಸೆ.5ರಂದು ಶ್ರೀ ಕೃಷ್ಣಾನುಗ್ರಹ ಸಭಾಭವನ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಹಾಗೂ ಗಾಲು ಕುರ್ಚಿ ರ್‍ಯಾಲಿ ಕಾರ್ಯಕ್ರಮವನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರು ಕುಶಾಲಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ವಿನಾಯಕ ರಾವ್ ಇವರು ಅನೇಕ ಬೆನ್ನುಮೂಳೆ ಮುರಿತಕ್ಕೊಳಗಾದ ಯುವಕರನ್ನು ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಜೀವನವನ್ನು ಹೇಗೆ ರೂಪಿಸಬೇಕು ಎಂದು ತಿಳಿಸಿದ್ದಾರೆ ಜೀವನದಲ್ಲಿ ಜಿಗುಪ್ಸೆಗೊಂಡ ಯುವಕರಿಗೆ ಧೈರ್ಯ ತುಂಬಿ ಜೀವನವನ್ನು ಮುನ್ನಡೆಸುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದಾರೆ.
ಯಾವುದೇ ಸಮಾಜಕ್ಕೆ ಹೊರೆಯಾಗುವುದಿಲ್ಲ ಯಾವುದೇ ಪಕ್ಷಕ್ಕೆ ಹೋರೆ ಆಗುವುದಿಲ್ಲ ನಮ್ಮ ಜೀವನವನ್ನು ನಾವೇ ಕಟ್ಟಿಕೊಳ್ಳುತ್ತೇವೆ ಬದುಕಿ ಸಾಧಿಸಿ ತೋರಿಸುತ್ತೇವೆ ಎಂದು ಶ್ರೀ ಕೆ ವಿನಾಯಕ ರಾವ್ ತಿಳಿಸಿದರು,
ವೇದಿಕೆಯಲ್ಲಿ ಸ್ವರ್ಣ ಗೌರಿ ಅಧ್ಯಕ್ಷರು ಸೇವಾ ಭಾರತಿ(ರಿ) ಬೆಳ್ತಂಗಡಿ, ಮುಖ್ಯ ಅತಿಥಿಗಳಾಗಿ ಡಾ.ಬಿ.ಏ ಕುಮಾರ್ ಹೆಗ್ಡೆ ಪ್ರಾಂಶುಪಾಲರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜು ಉಜಿರೆ, ಗೌರವ ಉಪಸ್ಥಿತಿ ದೀಪ ಆರ್.ಪಿ, ಯೋಜನಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆ ಘಟಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್ ಯೋಜನಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನಾ ಘಟಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಬಾಲಕೃಷ್ಣ ಕಾರ್ಯದರ್ಶಿ ಸೇವಾ ಭಾರತಿ ಬೆಳ್ತಂಗಡಿ, ಶ್ರೀ ಕೆ.ಪುರಂದರ ರಾವ್ ಸಂಚಾಲಕರು ಸೇವಧಾಮ ಸೌತಡ್ಕ, ಹಾಗೂ 175 ಎನ್ಎಸ್ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.