ಉಜಿರೆ: ಶಿಕ್ಷಕರ ದಿನಾಚರಣೆಯೆಂದರೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರನ್ನು ಸ್ಮರಿಸುವುದರೊಡನೆ ನಮಗೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳಲು ಇರುವಂತಹ ಒಂದು ಪ್ರಮುಖವಾದ ದಿನ.ಅದೇ ರೀತಿಯಾಗಿ ಸಾವಿತ್ರಿಬಾಯಿ ಫುಲೆ ಅವರಂತಹ ಮಹಿಳಾ ಶಿಕ್ಷಕರನ್ನು ಸ್ಮರಿಸಿಕೊಳ್ಳುವುದೂ ಕೂಡಾ ಮುಖ್ಯವಾಗುತ್ತದೆ ಎಂದು ಶ್ರೀ ಧ.ಮಂ.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಹೇಳಿದರು.
ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ದ್ವಿತೀಯ ಬಿ.ಇಡಿ. ಯ ಪ್ರಶಿಕ್ಷಣಾರ್ಥಿ ಇಸಾಕ್ ಮಾತನಾಡಿದರು.
ಕಾರ್ಯಕ್ರಮವನ್ನು ಕಿರಣ್ ಸ್ವಾಗತಿಸಿ, ಜೊಸ್ವಿಟಾ ಧನ್ಯವಾದ ಸಮರ್ಪಿಸಿ, ಫಾತಿಮಾತ್ ಜುಲೈರಿಯ ಕಾರ್ಯಕ್ರಮವನ್ನು ನಿರೂಪಿಸಿದರು.