Site icon Suddi Belthangady

ಫುಟ್ಬಾಲ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಕಾಯರ್ತಡ್ಕದ ದಿವ್ಯಜೋತಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಆಯ್ಕೆ

ಕಾಯರ್ತಡ್ಕ: ಅನುಗ್ರಹ ಶಾಲೆ ಉಜಿರೆಯಲ್ಲಿ ನಡೆದ ತಾಲೂಕು ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ನ ಅಂಡರ್ 14 ಬಾಲಕಿಯರ ವಿಭಾಗದಲ್ಲಿ ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಫೈನಲ್ ಹಂತಕ್ಕೆ ಪ್ರವೇಶ ಮಾಡಿ ಅನುಗ್ರಹ ಶಾಲೆಯ ವಿದ್ಯಾರ್ಥಿನಿಯರ ಜೊತೆ ರೋಚಕವಾಗಿ ಸೆಣಸಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ತಂಡದ ವಿವರ -ದೀಕ್ಷಾ ಎಂ(ನಾಯಕಿ), ವೃಕ್ಷ,ಯಶ್ಮಿತಾ, ಅನ್ವಿತಾ,ಆನ್ಸೀಲಾ, ಅನುಷಾ ವಿ. ಟಿ,ಕೃಪಾ,ಅನುಷಾ,ಖುಷಿ,ಆತ್ಮಿ,ಅನುಶ್ರೀ,ಸ್ಪರ್ಶ,ಸಜಿನಾ ಚಾಕೋ, ಹಿತಶ್ರಿ.

17ರ ಒಳಗಿನ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದಿವ್ಯ ಜೊತೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಫೈನಲ್ ಹಂತಕ್ಕೆ ಪ್ರವೇಶಿಸಿ ವಿಜೇತರಾದ ಅನುಗ್ರಹ ಶಾಲೆಯ ಬಾಲಕಿಯರಿಗೆ ಉತ್ತಮ ಪೈಪೋಟಿ ನೀಡುವ ಮೂಲಕ ದ್ವಿತೀಯ ಸ್ಥಾನಕ್ಕೆ ತೃಪ್ತರಾಗಿರುತ್ತಾರೆ.

Exit mobile version