ಬೆಳ್ತಂಗಡಿ: ಬೆಳ್ತಂಗಡಿ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ವತಿಯಿಂದ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ನಗರದ ಮುಖ್ಯರಸ್ತೆಯಲ್ಲಿರುವ ಅನಧಿಕೃತ ಅಂಗಡಿಗಳ ಬಗ್ಗೆ ಹಾಗೂ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಹಾಗೂ ಟ್ಯಾಕ್ಸ್ ಕಟ್ಟುವ, ಬಾಡಿಗೆ ಕಟ್ಟುವ ವ್ಯಾಪಾರಸ್ಥರಿಗೆ ಆಗುವ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.ಅದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ರೊನಾಲ್ಡ್ ಲೋಬೊ, ಜತೆಕಾರ್ಯದರ್ಶಿ ಯಶವಂತ್ ಪಟವರ್ಧನ್, ನಗರ ಪಂಚಾಯತ್ ಸದಸ್ಯ ಜಯಾನಂದ ಗೌಡ, ಜಯರಾಮ ಗೌಡ, ಶೀತಲ್ ಜೈನ್, ಸುಶೀಲ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.