Site icon Suddi Belthangady

ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನ

ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ, ಕೊಕ್ಕಡ ಇಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ, ಧರ್ಮಸ್ಥಳದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾವನ್ನು ಪಡೆದಿರುತ್ತಾರೆ.

ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಜೆಸ್ವಿನ್ ಕೆ ಜೆ, ಪ್ರಥಮ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಸಮನ್ವಿ ಪ್ರಥಮ, ಭರತ ನಾಟ್ಯ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಹಂಸಿನಿ ಭಿಡೆ ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಭಾರ್ಗವಿ ಪ್ರಥಮ,  ಆಶುಭಾಷಣ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಅಭಿಜ್ಞಾನ್ ಪ್ರಥಮ, ಒಂಭತ್ತನೆಯ ತರಗತಿಯ ಸ್ಮೃತಿ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಅನಘಾ ಎಂ ಡಿ, ಅನ್ವಿತಾ ಹೆಬ್ಬಾರ್, ಧೀಮಂತ್, ಸಂಜನಾ, ಆದರ್ಶ,  ಹಿತೇಶ್ ಇವರ ತಂಡವು ಕಾವ್ವಾಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಮಹಿಮಾ ಡಿ ಜಿ ದ್ವಿತೀಯ ಸ್ಥಾನ, ಭಾವಗೀತೆ ಸ್ಪರ್ಧೆಯಲ್ಲಿ ಹತ್ತನೆಯ ತರಗತಿಯ ಅನಿಕಾ ದ್ವಿತೀಯ ಸ್ಥಾನ, ಒಂಭತ್ತನೇ ತರಗತಿಯ ಮನ್ವಿತ್  ಎಸ್ ಮಿಮಿಕ್ರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹತ್ತನೆಯ ತರಗತಿಯ ಅಭಿಜ್ಞಾನ್ ಎ ಶೆಟ್ಟಿ ಮತ್ತು  ಶ್ರೀವತ್ಸ ಇವರ ತಂಡ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ರಂಗೋಲಿ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಆಶ್ರಿತ ತೃತೀಯ ಸ್ಥಾನ, ಗಜಲ್ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಅನ್ವಿತಾ ಹೆಬ್ಬಾರ್ ತೃತೀಯ ಸ್ಥಾನ ಮತ್ತು ಚಿನ್ಮಯಿ ರೈ, ಅಂಜನ, ಧನ್ಯಶ್ರೀ, ಸುಪ್ರೀತಾ, ಶ್ರೇಷ್ಠ ಹಾಗೂ ಮೌಲ್ಯ ಇವರ ತಂಡವು ಜಾನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.

ಹೀಗೆ ಒಟ್ಟು 20 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 7ಸ್ಪರ್ಧೆಯಲ್ಲಿ ಪ್ರಥಮ ಹಾಗೂ 4 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆದರೆ, 3 ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಮುಖ್ಯೋಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಹಾಗೂ ಶಿಕ್ಷಕ ವೃಂದ ತರಭೇತಿಯನ್ನು ನೀಡಿರುತ್ತಾರೆ.

Exit mobile version