Site icon Suddi Belthangady

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮಹಾಸಭೆ-ಶೇ.8 ಡಿವಿಡೆಂಡ್ ಘೋಷಣೆ

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 1811 ಸದಸ್ಯರನ್ನು ಹೊಂದಿದ್ದು, ಆರ್ಥಿಕ ವರ್ಷದಲ್ಲಿ 76.57 ಕೋಟಿ ರೂ. ವ್ಯವಹಾರ ನಡೆಸಿದೆ. ಈ ಸಾಲಿನಲ್ಲಿ 39 ಲಕ್ಷ ರೂ. ಲಾ‘ವನ್ನು ಗಳಿಸಿದ್ದು, ಸದಸ್ಯರಿಗೆ ಶೇ.8 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ತಿಳಿಸಿದರು.

ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭನದಲ್ಲಿ ಸೆ.3ರಂದು ನಡೆದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಲ್ಲಿ ಜನರು ವಿಶ್ವಾಸ ಇರಿಸಿ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.ಒಟ್ಟು 11.87 ಕೋ.ರೂ.ನ ವಿವಿಧ ಠೇವಣಿ ಹೊಂದಿದೆ.ಸಂಘದ ಅರಸಿನಮಕ್ಕಿ ಶಾಖೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆ.29ರಂದು ಉದ್ಘಾಟನೆಗೊಳ್ಳಲಿದೆ.ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ, ನಿರ್ದೇಶಕರಾದ ಕೆ.ಗಂಗಾಧರ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಎನ್.ಲಕ್ಷಣ ಗೌಡ, ಶಿವಕಾಂತ ಗೌಡ, ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವಾರ್ಷಿಕ ವರದಿ ವಾಚಿಸಿದರು.ನಿರ್ದೇಶಕಿ ಚೇತನಾ ಚಂದ್ರಶೇಖರ್ ಧರ್ಮದಕಳ ಸ್ವಾಗತಿಸಿ, ನಿರ್ದೇಶಕಿ ಸರೋಜಿನಿ ವಿಜಯ ಕುಮಾರ್ ಗೌಡ ವಂದಿಸಿ, ಸಿಬಂದಿ ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿದರು.

Exit mobile version