Site icon Suddi Belthangady

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕದ ಮೂವರು ವಿದ್ಯಾರ್ಥಿಗಳು ಆಯ್ಕೆ

ಕಾಯರ್ತಡ್ಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗಾಡಿಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಇದೇ ತಿಂಗಳ 9 ರಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಯಲ್ಲಿ ನಡೆಯುವ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ: 17 ವರ್ಷದ 82 ಕೆಜಿ ತೂಕದ ವಿಭಾಗದಲ್ಲಿ ಜೋಜು ಮ್ಯಾತ್ಯು ಪ್ರಥಮ, 17 ವರ್ಷದ 70 ಕೆಜಿ ತೂಕದ ವಿಭಾಗದಲ್ಲಿ ಅಡ್ಲಿನ್ ಎಲಿಜಬೆತ್ ಜೆರಿನ್ ಪ್ರಥಮ, 14 ವರ್ಷದ 60 ಕೆಜಿ ತೂಕದ ವಿಭಾಗದಲ್ಲಿ ಆಲ್ವಿನ್ ಥೋಮಸ್ ಪ್ರಥಮ.

Exit mobile version