ಮದ್ದಡ್ಕ: ಮದ್ದಡ್ಕ SKSSF ಘಟಕದ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ಸಮುದಾಯ ಭವನದಲ್ಲಿ ಆ.31 ರಂದು ಜರಗಿತು. ದಾರುಸ್ಸಲಾಮ್ ಕಾಲೇಜ್ ಬೆಳ್ತಂಗಡಿ ಇದರ ಪ್ರಾಧ್ಯಾಪಕರಾದ ಸಿದ್ದೀಕ್ ದಾರಿಮಿ ನಾವೂರು ಇವರ ದುವಾದೊಂದಿಗೆ ನೆರವೇರಿತು.
ನೂತನ ಸಮೀತಿಯ ಅಧ್ಯಕ್ಷರಾಗಿ M.A ಇಲ್ಯಾಸ್ ಚಿಲಿಂಬಿ ಉಪಾಧ್ಯಕ್ಷರುಗಳಾಗಿ ಫಯಾಝ್ ಸಬರಬೈಲು, ಮನ್ಸೂರ್ ಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ಶಾ ಮದ್ದಡ್ಕ, ಜೊತೆ ಕಾರ್ಯದರ್ಶಿಗಳಾಗಿ ಸಮೀರ್ ಬಾವುಟ ಗುಡ್ಡೆ, ಶಾಕಿರ್ ಚಿಲಿಂಬಿ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕಿಂಗ್ ಸ್ಟಾರ್, ಸಲಹೆಗಾರರಾಗಿ ಬಾವಾ ಹಾಜಿ ಕಿನ್ನಿಗೋಳಿ, ಹಾಮದ್ ಚಿಲಿಂಬಿ ಮತ್ತು 25 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಹಕೀಂ ಬಂಗೇರುಕಟ್ಟೆ ಅಧ್ಯಕ್ಷರು SKSSF ಬೆಳ್ತಂಗಡಿ ವಲಯ, ನೂರುಲ್ ಹುದಾ ಜುಮಾ ಮಸೀದಿಯ ಉಪಾಧ್ಯಕ್ಷರಾದ ಸಾಲಿ ಆಲಂದಿಲ, ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಗಳಾದ ಯಂ ಸಿರಾಜ್ ಚಿಲಿಂಬಿ, ಮದ್ದಡ್ಕ ಹೆಲ್ಪ್ ಲೈನ್ ನ ಅಧ್ಯಕ್ಷರಾದ ಶಂಸುದ್ದೀನ್ ಮಾಸ್ಟರ್ ಮದ್ದಡ್ಕ ಉಪಸ್ಥಿತರಿದ್ದರು.
ಯಂ.ಸಿರಾಜ್ ಚಿಲಿಂಬಿ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು.ನೌಶಾದ್ ಸಬರಬೈಲ್ ವಂದಿಸಿದರು.

