Site icon Suddi Belthangady

ಕಳೆಂಜ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಕಳೆಂಜ: ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಸಪ್ಟೆಂಬರ್ 1ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಸನ್ನ ಇವರು ವಹಿಸಿದ್ದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಮಂಜುನಾಥಗೌಡ ಇವರು ಮತ್ತು ಸದಸ್ಯರಾದ ಹರೀಶ್ ಕೆಬಿ, ಮಮತಾ ಮತ್ತು ಕ್ರೀಡಾ ಸಂಯೋಜಕರಾದ ಶೀನಪ್ಪ ಗೌಡ ಶಾಲೆಯ ಮುಖ್ಯ ಗುರುಗಳಾದ ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜನೆಯನ್ನು ಕುಮಾರಿ ಅಶ್ವಿನಿ, ಸ್ವಾಗತವನ್ನು ಶಾಲೆಯ ಮುಖ್ಯ ಗುರುಗಳಾದ ಕೃಷ್ಣಪ್ಪ ಮತ್ತು ಧನ್ಯವಾದವನ್ನು ಶಾಲೆ ಶಿಕ್ಷಕರಾದ ದಿಲೀಪ್ ರವರು ನೆರವೇರಿಸಿದರು.

ಕಬ್ಬಡಿ ಪಂದ್ಯಾಟದ ಫಲಿತಾಂಶ: ಹುಡುಗರ ಕಬಡ್ಡಿ ಪಂದ್ಯಾಟ ಪ್ರಥಮ ಜಿ ಯು ಪಿ ಎಸ್ ಬರಂಗಾಯ, ದ್ವಿತೀಯ ಸ್ಥಾನ ಶ್ರೀ ಮಂಜುನಾಥೇಶ್ವರ ಸ್ಕೂಲ್ ಧರ್ಮಸ್ಥಳ, ಹುಡುಗಿಯರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ನೇಲ್ಯಡ್ಕ ದ್ವಿತೀಯ ಸ್ಥಾನ ಶ್ರೀ ಮಂಜುನಾಥೇಶ್ವರ ಸ್ಕೂಲ್ ಪುದುವೆಟ್ಟು.

Exit mobile version