ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಪ್ರಾರಂಭಗೊಂಡು 66 ವರ್ಷಗಳ ಸೇವೆ ಸಲ್ಲಿಸಿ 67 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸೆ.1 ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ವಿಮಾ ಸಪ್ತಾಹದ ಉದ್ಘಾಟನೆಗೊಂಡಿತು.
ಈ ದಿನದ ಶಾಖೆಯ ಪ್ರಥಮ ಗ್ರಾಹಕರಾದ ವನಜ ಮರೋಡಿ ಉದ್ಘಾಟಿಸಿದರು.
ಶಾಖಾಧಿಕಾರಿ ವಿ.ಎಸ್. ಕುಮಾರ್ ಸ್ವಾಗತಿಸಿ, ಸಂಸ್ಥೆ 66 ವರ್ಷಗಳಿಂದ ಮಾಡುತ್ತಿರುವ ಗ್ರಾಹಕರ ಸೇವೆಯನ್ನು ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.ಆಡಳಿತ ವಿಭಾಗದ ಸಿಬ್ಬಂದಿಗಲಾದ ಗಣೇಶ್ ಶಾಸ್ತ್ರಿ, ಹರಿಶ್ಚಂದ್ರ ಹೆಗ್ಡೆ, ಅಭಿವೃದ್ಧಿ ಅಧಿಕಾರಿಗಳು, ವಿಮಾ ಪ್ರತಿನಿಧಿಗಳು, ಸಲಹೆಗಾರರು ಗ್ರಾಹಕರು ಉಪಸ್ಥಿತರಿದ್ದರು.