ಬೆಳ್ತಂಗಡಿ: ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಮೂರು ಪ್ರಥಮ ಸ್ಥಾನ, ಮೂರು ದ್ವಿತೀಯ ಸ್ಥಾನ ಮತ್ತು ಮೂರು ತೃತೀಯ ಸ್ಥಾನದೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿನ್ಮಯ್ ಜಿ.ಕೆ. ಮತ್ತು ಸುಯಾಷ್ ಪ್ರಭು, ಕವ್ವಾಲಿಯಲ್ಲಿ ನೇಹಾಕೃಷ್ಣ ಮತ್ತು ತಂಡ ಹಾಗೂ ಭಾವಗೀತೆಯಲ್ಲಿ ಚಿನ್ಮಯ್ ಜಿ.ಕೆ. ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕವನ ವಾಚನದಲ್ಲಿ ನೇಹಾಕೃಷ್ಣ, ಅರೇಬಿಕ್ ಪಠಣದಲ್ಲಿ ಅಮನ್ ಶೇಕ್, ಭರತನಾಟ್ಯದಲ್ಲಿ ದಿಯಾ ಆಳ್ವ ದ್ವಿತೀಯ ಬಹುಮಾನ ಪಡೆದಿದ್ದು, ಸಂಸ್ಕೃತ ಪಠಣದಲ್ಲಿ ಅನಘ ಮರಾಠೆ, ರಂಗೋಲಿಯಲ್ಲಿ ಅನನ್ಯ ಕೆ.ಎಸ್., ಜನಪದ ನೃತ್ಯದಲ್ಲಿ ನಿಧಿ ಮತ್ತು ತಂಡದವರು ತೃತೀಯ ಬಹುಮಾನ ಪಡೆದಿದ್ದಾರೆ.