ಕೊಕ್ಕಡ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸ್ಪರ್ಧೆ ಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಗಳು ಕೊಕ್ಕಡದ ಸಂತ ಫ್ರಾನ್ಸಿಸ್ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ.ಶಾಜಿ ಮಾತ್ಯು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಂತ ಫ್ರಾನ್ಸಿಸ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಬ್ರದರ್ ಜೋಸೆಫ್, ಪ್ರತಿಭಾ ಕಾರಂಜಿ ತಾಲೂಕು ನೋಡಲ್ ಅಧಿಕಾರಿ ಚೇತನಾಕ್ಷಿ, ಸಿ.ಆರ್.ಪಿ ವಿಲ್ಫ್ರೆಡ್ ಪಿಂಟೋ, ರಕ್ಷಕ ಶಿಕ್ಷಕ ಸಂಘದ ಜಯೇಶ್, ಪ್ರಿನ್ಸಿಪಾಲ್ ವಂದನಿಯ ಫಾ.ರೊಯ್ ಕಪ್ಪುಚಿನ್, ಫಾ.ಅರುಣ್, ಫಾ.ಬಿಪಿನ್, ಮುಖ್ಯೋಪಾಧ್ಯಾಯಿನಿ ವಂದನಿಯ ಸಿಸ್ಟರ್ ಚೈತನ್ಯ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 18ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಇದರಲ್ಲಿ ಬಾಗವಹಿಸಿದ್ದರು.