Site icon Suddi Belthangady

ಪೀಪಲ್ ಆಫ್ ತುಲುನಾಡ್ ಬೋಲ್ತೆರ್ ವತಿಯಿಂದ ಮುಗುಳಿ ಸ.ಹಿ.ಪ್ರಾ.ಶಾಲೆಯಲ್ಲಿ ಆಟಿ ಡೇ

ಮುಗುಳಿ: ಆ.26 ಪೀಪಲ್ ಆಫ್ ತುಲುನಾಡ್, ಬೋಲ್ತೇರ್ ನೇತೃತ್ವದಲ್ಲಿ ಆಟಿ ಡೇ ಕಾರ್ಯಕ್ರಮವು ಸ.ಹಿ.ಪ್ರಾ.ಮುಗುಳಿ ಶಾಲೆಯಲ್ಲಿ ನಡೆಸಲಾಯಿತು.ಹುಣ್ಸೆಕಟ್ಟೆ ಹಾಗೂ ಮುಗುಳಿ ಶಾಲೆಯ ಶಿಕ್ಷಕಿ ಸವಿತಾ ಹಾಗೂ ಕರಿಯಪ್ಪರವರು ಕಪ್ಪು ಹಲಗೆಯ ಮೇಲೆ ತುಲು ಅಕ್ಷರವನ್ನು ಬರೆದು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಗುಳಿ ಮತ್ತು ಹುಣ್ಸೆಕಟ್ಟೆಯ ಶಾಲಾ ಮಕ್ಕಳಿಗೆ ಚಿತ್ರಕಲೆ, ಮೊಬೈಲ್ ಫೋಟೋಗ್ರಫಿ, ತುಲುವಿನಲ್ಲಿ ಗಿಡಮರಗಳನ್ನು ಗುರುತಿಸುವುದು, ತುಲು ಫಜಲ್, ಪಿಕ್ ಆಂಡ್ ಆಕ್ಟ್, ಮತ್ತು ತುಲುವಿನಲ್ಲಿ ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳ ತೀರ್ಪುಗಾರರಾಗಿ ಪ್ರಶಾಂತ್ ಬೆಳ್ತಂಗಡಿ, ಕುಮಾರಿ ಯೋಗಿನಿ, ಸಾಗರ್ ಭಂಡಾರಿ, ಶಿವಪ್ರಸಾದ್ ಸಹಕರಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತುಲು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅತ್ರಾಡಿ ಅಮೃತ ಶೆಟ್ಟಿಯವರು ತುಲುನಾಡಿನ ಅಸ್ಮಿತೆ ಮತ್ತು ತುಲು ಭಾಷೆಯ ಮಹತ್ವವನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.

ಹಾಗೂ ಸಂಘಟನೆಯ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎರಡೂ ಶಾಲೆಯ ಮಕ್ಕಳಿಗೂ ಷೇಕ್ಸ್ ಪಿಯರ್ ಕಥೆ ಪುಸ್ತಕವನ್ನು ವಿತರಿಸಲಾಯಿತು.ಕಾರ್ಯಕ್ರವನ್ನು ರೋಶನ್ ಆರ್ ಹಾಗೂ ಜಯಂತ್ ನಿಟ್ಟಡೆಯವರು ನಿರೂಪಣೆ ಮಾಡಿದರು.

Exit mobile version