Site icon Suddi Belthangady

ಪೆರಾಡಿ ಶ್ರೀಧರ ಕೋಟ್ಯಾನ್ ನಿಧನ

ಮರೋಡಿ: ಟೈಲರ್ ಎಂದೇ ಖ್ಯಾತರಾಗಿದ್ದ ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಧರ ಕೋಟ್ಯಾನ್ ಪೆರಾಡಿ (61 ವ) ಅಲ್ಪಕಾಲದ ಅಸೌಖ್ಯದಿಂದ ಆ.29ರಂದು

ಸ್ವಗೃಹದಲ್ಲಿ ನಿಧನರಾದರು.

ಶ್ರೀಧರ್ ಅವರು ಮುಂಬೈನಲ್ಲಿ ಟೈಲರಿಂಗ್ ವೃತ್ತಿಯಲ್ಲಿದ್ದು ಬಳಿಕ ಕಳೆದ ಎರಡೂವರೆ ದಶಕಗಳಿಂದ ಪೆರಾಡಿಯಲ್ಲಿ ಎಸ್.ಕೆ ಟೈಲರ್ ಸ್ವಉದ್ಯಮವನ್ನು ನಡೆಸುತ್ತಿದ್ದರು.

ಪೆರಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ ಅವರು ಸಮಿತಿಯಲ್ಲಿ ಸಕ್ರಿಯರಾಗಿದ್ದರು.

ಮೃತರು ಪತ್ನಿ, ಯಕ್ಷಗಾನ ಶಿಕ್ಷಕ ಯುವ ಸಾಹಿತಿ ದೀವಿತ್ ಎಸ್.ಕೋಟ್ಯಾನ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Exit mobile version