ಬೆಳ್ತಂಗಡಿ: ಜನಪರ ಸಂಘಟನೆಗಳ ಒಕ್ಕೂಟ ದ.ಕ., ಪ್ರಗತಿಪರ ಸಂಘಟಗಳ ಹೋರಾಟ ಸಮಿತಿ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಆ.28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಆವರಣದಲ್ಲಿ ಸೌಜನ್ಯ ಕೊಲೆಯ ಎಸ್ ಟಿ ಐ ತನಿಖೆಗೆ ಒತ್ತಾಯಿಸಿ ಹಾಗೂ ಆಸಹಜ ಸಾವುಗಳ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಚಲೋ ಬೆಳ್ತಂಗಡಿ ಮಹಾಧರಣಿ ನಡೆಯಿತು.
ಮಾಜಿ ಶಾಸಕ ಜನಪರ ಸಂಘಟನೆಗಳ ಗೌರವ ಸಂಚಾಲಕ ಕೆ.ವಸಂತ ಬಂಗೇರ ಉದ್ಘಾಟಿಸಿ ತನಿಖೆಗೆ ಒತ್ತಾಯಿಸಿ ಮಾತನಾಡಿದರು.ಸಂಘಟನೆಯ ಸಂಚಾಲಕ ಕಾರ್ಮಿಕ ಮುಖಂಡ ಬಿ.ಎಂ.ಭಟ್, ಮಹಿಳಾ ಹೋರಾಟಗಾರ್ತಿ ಕಾ.ಲೀಲಾ, ಛಲವಾದಿ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ.ಮೀನಾಕ್ಷಿ, ಕಾರ್ಯದರ್ಶಿ ಬೇಬಿ, ಸಮುದಾಯದ ಸಂಘಟನೆಯ ಸುರೇಂದ್ರ, ಪ್ರಮುಖರಾದ ಮುನೀರ್ ಕಾಟಿಪಳ್ಳ, ಗೌರಮ್ಮ ಬೆಂಗಳೂರು, ರೈತ ಸಂಘದ ಟಿ.ಯಶವಂತ, ಭರತ್ ರಾಜ್ ಮಂಡ್ಯ, ಸಿಪಿಎಂ ನ ಯಾದವ ಶೆಟ್ಟಿ, ಭೀಮಣ್ಣ ಗೌಡ, ಬಸವರಾಜ ಪೂಜಾರ್ ವಿಠ್ಠಲ ಮಲೆಕುಡಿಯ, ಬಸಮ್ಮ, ಮೈಸೂರು ಜನಾರ್ಧನ್ ಜನ್ನಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಮಹಿಳಾ ವಿಚಾರ ವೇದಿಕೆಯ ಪ್ರಭಾ, ನರೇಂದ್ರ, ಸತ್ಯ, ಅಖಿಲ ಬೆಂಗಳೂರು, ಸ್ಟಾನಿ ಮೈಸೂರು,ಆಶ್ರಫ್ ಹರೇಕಳ, ವಾಸುದೇವ ಉಚ್ಚಿಲ, ಸರ್ವೋದಯ ಪಕ್ಷದ ಆದಿತ್ಯ ಕೊಲ್ಲಾಜೆ, ಜಗದೀಶ್ ಬಜಾಲ್, ಸದಾಶಿವ ದಾಸ್, ಜಿ. ಪ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೆಡಿ, ನಮಿತಾ, ಕಾಂಗ್ರೆಸ್ ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶೀಪಟ್ಣ, ಮಹಿಳಾ ಸಂಘಟನೆಯ ಮಲ್ಲಿಗೆ ಸಿರಿಮನೆ, ರಾಘವೇಂದ್ರ ಚಾರ್ವಕ, ಹೈಕೋರ್ಟ್ ವಕೀಲರಾದ ಶ್ರೀನಿವಾಸ, ಪಿ.ಕೆ.ಸತೀಶ್, ಭೂಮಿ ಗೌಡ, ಜಯನ್ ಮಲ್ಪೆ ಮೊದಲಾದವರು ಹಾಜರಿದ್ದರು.