Site icon Suddi Belthangady

ಧರ್ಮಸ್ಥಳ: ದೇವರ ದರ್ಶನಕ್ಕೆ ಹೋಗಿದ್ದಾಗ ಕಾರಿನ ಗಾಜು ಒಡೆದು ಯಾತ್ರಾರ್ಥಿಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ರೂ.2 ಲಕ್ಷ ಸೊತ್ತು ಕಳವು

ಧರ್ಮಸ್ಥಳ : ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಗದಗ ಮೂಲದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಗದಗ ಮಾಗಡಿ ಗ್ರಾಮದ ನಿವಾಸಿ ಬಸವರಾಜ ಗುಡಸಲಮನಿ ಎಂಬವರು ಆ.26 ರಂದು ಬೆಳಿಗ್ಗೆ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ತಮ್ಮ ಕಾರಿನಲ್ಲಿ ಬಂದಿದ್ದರು. ಕಾರನ್ನು ಲಾಕ್ ಮಾಡಿ ದೇವಸ್ಥಾನದ ಹತ್ತಿರ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ.ಕಳ್ಳರು ಅವರು ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಕಾರಿನ ಗಾಜನ್ನು ಒಡೆದು ಕಾರಿನ ಒಳಗಿದ್ದ ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದ ರೂ.1.96 ಲಕ್ಷ ಮೌಲ್ಯದ 40 ಗ್ರಾಂ ತೂಕದ ಕರಿಮಣಿ ಸರ ಮತ್ತು ಸುಮಾರು ರೂ. 4 ಸಾವಿರ ಮೌಲ್ಯದ 1 ಮೊಬೈಲ್‌ನ್ನು ಕಳವುಗೈದಿದ್ದರು.

ಬಸವರಾಜು ಅವರು ದೇವರ ದರ್ಶನ ಮುಗಿಸಿ ಹಿಂತಿರುಗಿದ ವೇಳೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು ಅದರಲ್ಲಿದ್ದ ವಸ್ತುಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version