ಕೊಯ್ಯೂರು: ಶ್ರೀ ಪಂಚದುರ್ಗಾ ಯಕ್ಷಗಾನ ಸಂಘ ಆದೂರು ಪೇರಾಲ್ ಇದರ ಸಕ್ರೀಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷ ರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ತಾಳಮದ್ದಳೆ ಅರ್ಥದಾರಿ/ ವೇಷದಾರಿ ದಿವಂಗತ ಹೊನ್ನಪ್ಪ ಗೌಡರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಯಕ್ಷಗಾನ ತಾಳಮದ್ದಳೆಯು ಆ.26ರಂದು ಹೊನ್ನಪ್ಪ ಗೌಡರ ಮಗ ವಿಜಯ ಗೌಡರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು . ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಿತು.
ಭಾಗವತರಾಗಿ ಶ್ರೀ ನಿವಾಸ ಗೌಡ ಬಳ್ಳಮಂಜ, ಉಮೇಶ್ ಆಚಾರ್ಯ ಕೋಡಿಯೇಲು, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಗಣೇಶ ಭಟ್ ಬೆಳಾಲ್, ಚಕ್ರ ತಾಳದಲ್ಲಿ ವಿಶ್ವನಾಥ ಗೌಡ ಪಾಂಬೇಲು, ಪಾತ್ರವರ್ಗದಲ್ಲಿ ರಾಮನಾಗಿ ನಾರಾಯಣ ಭಟ್ ಬಾಸಮೆ, ಲಕ್ಷ್ಮಣನಾಗಿ ಪ್ರಸಾದ್ ಸವಣೂರು, ರಾವಣನಾಗಿ ಕೊಳ್ತಿಗೆ ನಾರಾಯಣ ಗೌಡ, ಅತಿಕಾಯನಾಗಿ ಗುಡ್ಡಪ್ಪ ಗೌಡ ಬಲ್ಯ,ವಿಭೀಶನನಾಗಿ ವಿಜಯ್ ಕುಮಾರ್ ಎಂ ಕೊಯ್ಯೂರು ಪಾತ್ರಗಳನ್ನು ನಿರ್ವಹಿಸಿದರು.
ನುಡಿನಮನ ಕಾರ್ಯಕ್ರಮದಲ್ಲಿ ಶ್ರೀ ಅಶೋಕ್ ಕುಮಾರ್ ಕೊಯ್ಯೂರು, ಶ್ರೀ ಪ್ರಚಂಡ ಭಾನು ಪಾಂಬೇಲು, ಶ್ರೀ ವೆಂಕಣ ಅಮರ ನಿಲಯ, ಶ್ರೀ ವಿಜಯ ಕುಮಾರ್ ಎಂ ಕೊಯ್ಯೂರು ಹೊನ್ನಪ್ಪ ಗೌಡರ ಗುಣಗಾನ ಮಾಡಿದರು. ಈ ಕಾರ್ಯಕ್ರಮವನ್ನು ಶ್ರೀ ಲೋಕೇಶ್ ಗೌಡ ಪಾಂಬೇಲು, ಸತೀಶ್ ದೇಂತ್ಯಾರು, ರುಕ್ಮಯ ನಾಯ್ಕ ಆದರ್ಶ ನಗರ, ಮಾಯಿಲಪ್ಪ ಗೌಡ ಸಂಯೋಜಿಸಲು ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ದಯಾಮಣಿ ರವೀಂದ್ರ ಗೌಡ, ಉಪಾಧ್ಯಕ್ಷ ಹರೀಶ್ ಗೌಡ ಬಜಿಲ ಉಪಸ್ಥಿತರಿದ್ದರು.