ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್‌ನ ಮಹಿಳಾ ಘಟಕ ಆನ್ಸ್ ಕ್ಲಬ್‌ನ ೧೨ನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.೨೪ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.ದೇರಳಕಟ್ಟೆ ರೋಟರಿ ಕ್ಲಬ್ಬಿನ 2-24-25ನೇ ಸಾಲಿನ ನಿಯೋಜಿತ ಅಧ್ಯಕ್ಷೆ ಸೌಮ್ಯ ರವೀಂದ್ರ ಶೆಟ್ಟಿ ನೂತನ ಆನ್ಸ್ ಕ್ಲಬ್ ಅಧ್ಯಕ್ಷೆ ಡಾ|ಅನಿತಾ ದಯಾಕರ್ ಮತ್ತು ಕಾರ್ಯದರ್ಶಿ ಡಾ|ಚಾರುಲತಾ ಉದ್ಯಾವರ್ ಮತ್ತು ತಂಡಕ್ಕೆ ಅಧಿಕಾರದ ಜವಾಬ್ದಾರಿ ವಹಿಸಿ ರೋಟರಿ ಕ್ಲಬ್ ಸಹಕಾರವಿಲ್ಲದೆ ಆನ್ಸ್ ಕ್ಲಬ್ ನಡೆಯದು.ಒಂದು ವರ್ಷದಲ್ಲಿ ಉತ್ತಮ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ನುಡಿದು ನೂತನ ತಂಡಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿ ರೋಟರಿ ವಲಯ 4ರ ಝೋನಲ್ ಲೆಫ್ಟಿನೆಂಟ್ ಯಶವಂತ ಪಟವರ್ಧನ್ ಮಹಿಳಾ ಘಟಕ ರೋಟರಿಯ ಮುಖ್ಯ ಶಕ್ತಿ.ಒಂದೇ ಕುಟುಂಬದ ರೀತಿಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗುತ್ತಿದ್ದಾರೆ. ದೊರೆತ ಅವಕಾಶದಲ್ಲಿ ನೂತನ ತಂಡ ತಮ್ಮ ಸೇವಾ ಚಟುವಟಿಕೆಗಳಲ್ಲಿ ಸಾಧನೆ ಮೆರೆಯಬೇಕೆಂದು ನುಡಿದು ಶುಭ ಕೋರಿದರು. ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಆನ್ಸ್ ಕ್ಲಬ್ ನಿರ್ಗಮನಾಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ ಹಿರಿಯ ರೋಟರಿ ಸದಸ್ಯರ ಸಹಕಾರದಿಂದ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು. ಸಹಕರಿಸಿದ ಎಲ್ಲರಿಗೂ ಮನದಾಳದ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ರೇಷ್ಮಾ ಅಬೂಬಕ್ಕರ್ ಕಳೆದ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
2023-24ನೇ ಸಾಲಿನ ಆನ್ಸ್ ಕ್ಲಬ್ ಪದಾಧಿಕಾರಿಗಳನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು.ನೂತನ ಅಧ್ಯಕ್ಷೆ ಡಾ|ಅನಿತಾ ದಯಾಕರ್ ರೋಟರಿ ಸದಸ್ಯರ ಸಹಕಾರ ಮಾರ್ಗದರ್ಶನದಲ್ಲಿ ಕ್ಲಬ್ಬಿನ ಜವಾಬ್ದಾರಿಯನ್ನು ನಿರ್ವಹಿಸುವ ಭರವಸೆ ನೀಡಿ ಅಂಗನವಾಡಿ ಶಾಲೆ ಕಾಲೇಜುಗಳಲ್ಲಿ ಅರೋಗ್ಯ ತಪಾಸಣಾ ಶಿಬಿರ ಮಹಿಳೆಯರಿಗಾಗಿ ಯೋಗ ಮತ್ತು ವೈದ್ಯಕೀಯ ಶಿಬಿರ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಲಾಗುವುದು.ನೊಂದವರ ಕಷ್ಟಕ್ಕೆ ಕಂಬನಿ ಮಿಡಿಯುವುದಕ್ಕಿಂತ ಸಹಾಯ ನೀಡುವುದೇ ಶ್ರೇಷ್ಠ ಕಾರ್ಯ ಎಂದು ನುಡಿದು ಎಲ್ಲರ ಸಹಕಾರ ಕೋರಿದರು.
ಸಾಧಕರಿಗೆ ಅಭಿನಂದನೆ: ವಿಶೇಷ ಸಾಧನೆಗೈದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಡಾ|ರೋಹಿತ್ ಪರವಾಗಿ ಡಾ|ಭಾರತಿ ಮತ್ತು ಡಾ|ಗೋಪಾಲಕೃಷ್ಣ ಡಾ|ವಿಭಾ ಸಹನಾ ಕಾಮತ್ ಅಮೃತ್ ಪರವಾಗಿ ಅರುಣಕುಮಾರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.ಹೇಮಾವತಿ ಮತ್ತು ಪದ್ಮಾವತಿ ಅವರ ಅರೋಗ್ಯ ಚಿಕಿತ್ಸೆಗಾಗಿ ಡಾ|ಅನಿತಾ ದಯಾಕರ್ ಮತ್ತು ಡಾ|ಎಂ.ಎಂ.ದಯಾಕರ್ ಆರ್ಥಿಕ ನೆರವನ್ನು ನೀಡಿದರು.ಅಣ್ಣಿ ಪೂಜಾರಿ ಮತ್ತು ರೇಷ್ಮಾ ಅಬೂಬಕ್ಕರ್ ಅವರನ್ನು ಗೌರವಿಸಲಾಯಿತು.ರಶ್ಮಿ ಪಟವರ್ಧನ್ ಅವರು ನೂತನ ಅಧ್ಯಕ್ಷೆ ರಾಜಶ್ರೀ ರಾವ್ ಅವರು ನೂತನ ಕಾರ್ಯದರ್ಶಿ. ಡಾ|ದೀಪಾಲಿ ಡೋಂಗ್ರೆ ಅವರು ಕಾರ್ಯಕಾರಿ ಸಮಿತಿ ಡಾ|ಭಾರತಿ ಗೋಪಾಲಕೃಷ್ಣ ಅವರು ವಿಶೇಷ ಸಾಧಕರನ್ನು ಪರಿಚಯಿಸಿದರು.
ಶ್ರೀಧರ್ ಕೆ.ವಿ. ಸಂಪಾದಕತ್ವದ ರೋಟರ್ ಇ ಪತ್ರಿಕೆಯನ್ನು ಯಶವಂತ ಪಟವರ್ಧನ್ ಬಿಡುಗಡೆಗೊಳಿಸಿದರು. ರೋಟರಿ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು ವಿವಾಹ ವಾರ್ಷಿಕೋತ್ಸವ ಆಚರಿಸಿದ ರೋಟರಿ ಸದಸ್ಯರನ್ನು ಅಭಿನಂದಿಸಿದರು.ಲಿಲ್ಲಿ ಆಂಟೋನಿ ಮತ್ತು ವೈಷ್ಣವಿ ಪ್ರಭು ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಡಾ|ಚಾರುಲತಾ ಉದ್ಯಾವರ ವಂದಿಸಿದರು. ಕಾರ್ಯಕ್ರಮದ ಮೊದಲು ಕುಮಾರಿ ಅದಿತಿ ಎಂ. ಎಸ್. ಅವರಿಂದ ನೃತ್ಯ ವೈವಿಧ್ಯ ನಡೆಯಿತು.