Site icon Suddi Belthangady

ಸೌಜನ್ಯ ಪ್ರಕರಣ: ಮರುತನಿಖೆಗೆ ಮಲವಂತಿಗೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮ ಸಮಿತಿಯಿಂದ ಮನವಿ

ಮಲವಂತಿಗೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮ ಸಮಿತಿಯಿಂದ ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ನಡೆಸುವಂತೆ ಮಲವಂತಿಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗೌಡರ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಮಲವಂತಿಗೆ ಅಧ್ಯಕ್ಷರಾದ ಆನಂದ ಗೌಡ ಮೈರ್ನೋಡಿ, ಉಪಾಧ್ಯಕ್ಷರಾದ ಜಯವರ್ಮ ಗೌಡ ಕಲ್ಬೆಟ್ಟು, ಜಯಾನಂದ ಗೌಡ, ಯುವ ವೇದಿಕೆ ಅಧ್ಯಕ್ಷರಾದ ದಿನೇಶ್ ಡಿ ಗೌಡ, ಗ್ರಾಮದ ಮಾಗನೆ ಗೌಡರಾದ ಶೇಖರ ಗೌಡ ಹೊಳೆಕೆರೆ, ತಾಲೂಕು ಯುವ ವೇದಿಕೆ ನಿರ್ದೇಶಕರಾದ ತೀಕ್ಷಿತ್ ಕೆ.ಕಲ್ಬೆಟ್ಟು, ಚಂದ್ರಶೇಖರ್ ಗೌಡ ತಂಗಿತ್ತಿಪ್ಪಾಲು ಹಾಗೂ ಸದಸ್ಯರಾದ ಶೀನಪ್ಪ ಗೌಡ ನೇತ್ರಕೊಡಂಗೆ, ನಾರಾಯಣ ಗೌಡ ಕೊಂಡಾಲು ಮತ್ತು ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.

Exit mobile version