Site icon Suddi Belthangady

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ನಿಡ್ಲೆ, ಪೆರ್ಲ, ಕೊಕ್ಕಡ ವಲಯ ಮಟ್ಟದ ಖೋ ಖೋ ಪಂದ್ಯಾಟ

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಶಾಲೆಯಲ್ಲಿ ನಿಡ್ಲೆ, ಪೆರ್ಲ,ಕೊಕ್ಕಡ ವಲಯ ಮಟ್ಟದ ಖೋ ಖೋ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ವಲಯ ಮಟ್ಟದ ಖೋ ಖೋ ಪಂದ್ಯಾಟವನ್ನು ಪುದುವೆಟ್ಟು ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಟಿಕ್ಕಾ ಸಾಹೇಬ್ ರವರು ತಮ್ಮ ದಿವ್ಯ ಹಸ್ತದಿಂದ ದೀಪ ಪ್ರಜ್ವಲನ ಮಾಡುವುದರ ಮೂಲಕ ಖೋ ಖೋ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುದುವೆಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಅನಿತಾ ರವರು ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.ಕನ್ಯಾಡಿ ಶಾಲೆಯ ಮುಖ್ಯ ಶಿಕ್ಷಕ ಮರಿಯಪ್ಪ ಸರ್ ಹಾಗೂ ನೆಲ್ಯಾಡ್ಕ ಶಾಲೆಯ ದೈಹಿಕ ಶಿಕ್ಷಕ ಶ್ರೀಧರ್, ಸೈನ್ ಫ್ರಾನ್ಸಿಸ್ ಕೊಕ್ಕಡ ಶಾಲೆಯ ಶಾರೀರಿಕ ಶಿಕ್ಷಕ ಪ್ರಸಾದ್ ರವರು, ಶಾಲೆಯ ಹಿರಿಯ ಶಿಕ್ಷಕಿ ತೇಜಾವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತಹ ಟಿಕ್ಕಾ ಸಾಹೇಬ್ ರವರು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಇಂಥ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿರುವಂಥದ್ದು ತುಂಬಾ ಉತ್ತಮವಾದ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಸಿನರಾಗಿದ್ದ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಅನಿತಾ ರವರು ಮಾತನಾಡಿ ಕ್ರೀಡೆ ಎನ್ನುವುದು ವಿದ್ಯಾರ್ಥಿಗಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ.ಎಲ್ಲ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಶಾಲೆಗೆ ಹೆಸರನ್ನು ತರುವಂತ ವಿದ್ಯಾರ್ಥಿಗಳಾಗಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶೀನಪ್ಪಗೌಡ ರವರು ಹಲವು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಖೋ ಖೋ ಪಂದ್ಯಾಟವನ್ನು ಆಯೋಜನೆ ಮಾಡಿಕೊಂಡು ಬಂದಿದ್ದೇವೆ.ಊರವರ ಸಹಕಾರ ದಿಂದ ಕ್ರೀಡಾಕೂಟವನ್ನು ಆಯೋಜನೆ ಮಾಡಲು ಸಹಕಾರಿಯಾಗಿದೆ.ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ.ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನ ಗೀತೆಯೊಂದಿಗೆ ಪ್ರಾರಂಭಗೊಂಡಂತಹ ಕಾರ್ಯಕ್ರಮದಲ್ಲಿ ಶೀನಪ್ಪ ಗೌಡರವರು ಸ್ವಾಗತಿಸಿ, ನಿಶಾಂತ್ ಕುಮಾರ್ ರವರು ಧನ್ಯವಾದಗೈದ ಕಾರ್ಯಕ್ರಮವನ್ನು ಪವನ್ ಕುಮಾರ್ ರವರು ನಿರೂಪಿಸಿದರು.ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.

Exit mobile version