ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ 2022-23 ನೇ ವರ್ಷದ ವಾರ್ಷಿಕ ಮಹಾಸಭೆ ಆ.24 ರಂದು ಬ್ಯಾಂಕಿನ ವಠಾರದಲ್ಲಿ ಜರಗಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದರ ಗೌಡ ಇಚ್ಚಿಲ ರವರು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಪ್ರೇಮ, ನಿರ್ದೇಶಕರಾದ ಶ್ರೀನಿವಾಸ ಗೌಡ ಮಧುರ, ಶ್ರೀಧರ ಪೂಜಾರಿ, ಅಬ್ದುಲ್ ರಹಿಮಾನ್ ಬಿ.ಎಂ, ಸೌಮ್ಯಲತಾ, ಅಶ್ವತ್ ಇ.ಎಸ್, ಅರುಣ ಕುಮಾರ್, ಎಂ.ಗೋಪಾಲ ಕೃಷ್ಣ ಶೆಟ್ಟಿ, ಅಣ್ಣು ನಾಯ್ಕ, ಸಾದು, ಪುಷ್ಪಾವತಿ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಸಿ.ರೈ ವರದಿ ವಾಚಿಸಿದರು.ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಆರ್ಥಿಕ ವರ್ಷದಲ್ಲಿ ರೂಪಾಯಿ 347 ಕೋಟಿ ವ್ಯವಹಾರ ನಡೆಸಿ ರೂ.9037682/ ನಿವ್ವಳ ಲಾಭ ಗಳಿಸಿದೆ.
ಶೇ.12ಡಿವಿಡೆಂಟ್ ಘೋಷಿಸಲಾಯಿತು.ಸಭೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ 33 ಮಂದಿ ಸದಸ್ಯರನ್ನು ಗೌರವಿಸಲಾಯಿತು.ನಿಧನ ಹೊಂದಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆನಕ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಸಿಬ್ಬಂದಿ ಮೋಹನ ಗೌಡ ನಿರೂಪಿಸಿ ವಂದಿಸಿದರು.