Site icon Suddi Belthangady

ಚಂದ್ರಯಾನ-3 ಯಶಸ್ವಿ ಸಂಭ್ರಮಿಸಿದ ಎಸ್.ಡಿ.ಎಂ ಬೆಳ್ತಂಗಡಿಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು

ಬೆಳ್ತಂಗಡಿ: ಎಸ್ ಡಿ ಎಂ ಬೆಳ್ತಂಗಡಿಯ ಸ್ಕೌಟ್ ಗೈಡ್ ಗಳಿಂದ ಭಾರತೀಯ ಬಾಹ್ಯಾಕಾಶ ಚಂದ್ರಯಾನ-3 ಐತಿಹಾಸಿಕ ಸಾಧನೆ ಮಾಡಿದ ನಿಮಿತ್ತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಳ್ತಂಗಡಿ ಯ ನಗರದಲ್ಲಿ ಮೆರವಣಿಗೆ ಮೂಲಕ ಘೋಷಣೆಗಳೊಂದಿಗೆ, ಸಿಹಿ ತಿಂದು ಸಂಭ್ರಮಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಹೇಮಲತಾ ಎಂ.ಆರ್ ಪ್ರೋತ್ಸಾಹ ನೀಡಿದರು.ಸ್ಕೌಟ್ ಮಾಸ್ಟರ್ ಮಂಜುನಾಥ್ ಸಹಕರಿಸಿದರು.ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮ ಸಂಘಟಿಸಿದರು.

Exit mobile version