ಬೆಳ್ತಂಗಡಿ: ಶ್ರೀಗಂಧ ಕಳವು ಪ್ರಕರಣದಲ್ಲಿ ನ್ಯಾಾಯಾಂಗ ಬಂಧನದಲ್ಲಿದ್ದು, ಬೆಳ್ತಂಗಡಿ ನ್ಯಾಯಾಂಗ ಬಂಧನದಲ್ಲಿ ಜಾಮೀನು ಪಡೆದು 27 ವರ್ಷಗಳಿಂದ ನ್ಯಾಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಮುಂಬಯಿ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡು ತಿರುಗಾಡುತಿದ್ದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಾಮದ ಕುಂಡಾಪು ಮನೆಯ ಅಶ್ರಫ್ ಎಂಬಾತನನ್ನು ಆ.24ರಂದು ಕೇರಳ ಪೊಲೀಸರ ಸಹಕಾರದೊಂದಿಗೆ ಕೇರಳದಿಂದ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕ ನಾಗೇಶ್, ಉಪನಿರೀಕ್ಷಕ ಧನರಾಜ್ ಹಾಗೂ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೆಬಲ್ ಬೆನ್ನಿಚ್ಚನ್, ಗಂಗಾಧರ್, ಅಶೋಕ್ ಅವರು ಆರೋಪಿ ಅಶ್ರಫ್‌ನನ್ನು ಬಂಧಿಸುವಲ್ಲಿ ಸಹಕಾರ ನೀಡಿದ್ದರು.
ಆರೂಪಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಲ್‌ಪಿಸಿ ನಂ.02/2010: ಅ.ಕ್ರ. 107/1996 ಕಲಂ: 86, 87, ಕೆಎಫ್ ಆ್ಯಕ್‌ಟ್ 379 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.ಹಾಗೂ ಉಪ್ಪಿನಂಗಡಿ ಮತ್ತು ಕೊಣಾಜೆ ಠಾಣೆಯಲ್ಲಿ ಎಲ್‌ಪಿಸಿ ನಂ. 125/2004; ಕಲಂ:279,304(ಎ)ಅಂತೆ ಪ್ರಕರಣ ವಿಚಾರಣೆಗೆ ಬಾಕಿ ಇದೆ.