Site icon Suddi Belthangady

ಸೌಜನ್ಯ ಪ್ರಕರಣ: ಪುದುವೆಟ್ಟು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ವತಿಯಿಂದ ಸರಕಾರಕ್ಕೆ ಮನವಿ

ಪುದುವೆಟ್ಟು: ಧರ್ಮಸ್ಥಳ ಪಾಂಗಾಳ ನಿವಾಸಿ ಕುಮಾರಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮರುತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಪುದುವೆಟ್ಟು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ವತಿಯಿಂದ ಪುದುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ದೇವಣ್ಣಗೌಡ, ವನದುರ್ಗ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಗೌಡ ಏಟೋಡು, ಸೋಮ ಗೌಡ ನೆಕ್ಕಿಲಾಡಿ, ಶ್ರೀನಿವಾಸ ಗೌಡ ಪಡ್ಪು ಮಿಯ್ಯಾರು, ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ, ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಾಮೋದರ ಗೌಡ ಮುಜಾರುದಡ್ಡ ಸ್ವಾಗತಿಸಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಗೌಡ ಡೆಚ್ಚಾರು ಧನ್ಯವಾದ ಸಲ್ಲಿಸಿದರು.

Exit mobile version