ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪ ಗ್ರಹ ಶಾಖೆಯ ಅಭಿವೃದ್ಧಿ ಅಧಿಕಾರಿ ಎಂ.ವಿ.ಶೆಟ್ಟಿ ಬಳಗದ ಪ್ರತಿನಿಧಿಗಳ ಸಭೆ ಉಪಗ್ರಹ ಶಾಖೆಯಲ್ಲಿ ಆ.23 ರಂದು ನಡೆಯಿತು.
ಸಭೆಯಲ್ಲಿ ಬೆಳ್ತಂಗಡಿ ಶಾಖಾಧಿಕಾರಿ ವಿ.ಎಸ್.ಕುಮಾರ್ ಹೊಸ ವ್ಯವಹಾರ, ಕ್ಲಬ್ ಮೆಂಬರ ಸವಲತ್ತು ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಸಭೆಯಲ್ಲಿ 2022- 23 ನೇ ಸಾಲಿನಲ್ಲಿ ಸಾಧನೆಗೈದ ಪ್ರತಿನಿಧಿಗಳನ್ನು ಗೌರವಿಸಲಾಯಿತು.ಅಭಿವೃದ್ಧಿ ಅಧಿಕಾರಿ ಎಂ. ವಿ. ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪ್ರತಿನಿಧಿ ಲೋಕೇಶ್ ಶೆಟ್ಟಿ ಧರ್ಮಸ್ಥಳ ವಂದಿಸಿದರು. ಜಗನ್ನಾಥ ಹೆಚ್. ಪ್ರಾರ್ಥಿಸಿದರು