Site icon Suddi Belthangady

ಚಂದ್ರಯಾನ -3 ರ ಯಶಸ್ಸಿಗಾಗಿ ನಾವೂರು ದೇವಸ್ಥಾನದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಉಜಿರೆ: ಆ.23ರಂದು  ಸಂಜೆ 5.20ರಿಂದ ನಮ್ಮ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣ ಆರಂಭವಾಗಲಿದೆ.

19 ನಿಮಿಷದ ಈ ಅಂತಿಮ ಲ್ಯಾಂಡಿಗ್ ನ್ನು ವೀಕ್ಷಿಸಲು ಇಡೀ ಪ್ರಪಂಚ ತಯಾರಾಗಿ ನಿಂತಿದೆ.

ಚಂದ್ರಯಾನ 3ರ ಈ ಪಯಣ ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಎಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ  ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಗ್ರಾಮದ ಭಕ್ತರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್(ರಿ) ಪದಾಧಿಕಾರಿಗಳು ಉಪಸ್ಥಿತರಿದ್ದರು.ವೇ।ಮೂ। ಅಶ್ವಿನಿ ಭಟ್ ಪ್ರಾರ್ಥನೆಯನ್ನು ನೆರವೇರಿಸಿದರು.

Exit mobile version