Site icon Suddi Belthangady

ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಟಿದ ದಿನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಮಹಿಳಾ ಒಕ್ಕೂಟದಲ್ಲಿ ಆಟಿದ ದಿನ ಆಚರಣೆ ಇತ್ತೀಚೆಗೆ ನಡೆಯಿತು.ಮಹಿಳಾ ಮಂಡಲಗಳ ಮಹಾ ಪೋಷಕರಾದ ಲೋಕೇಶ್ವರಿ ವಿನಯಚಂದ್ರ ವಿವಿಧ ಖಾದ್ಯಗಳ ಉದ್ಘಾಟಿಸಿದರು.ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಚೆನ್ನೆ ಮಣೆ ಆಟದ ಮೂಲಕ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷೆ ಸವಿತಾ ಜಯದೇವ್ ವಹಿಸಿದ್ದರು.ಗೌರವಾಧ್ಯಕ್ಷೆ ಶಾಂತಾ ಬಂಗೇರ ಸ್ವಾಗತಿಸಿದರು ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ ನಿರೂಪಿಸಿ ಕಾರ್ಯದರ್ಶಿ ಆಶಾ ಸತೀಶ್ ವಂದಿಸಿದರು.ಇದೇ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ರವರನ್ನು ಗೌರವಿಸಲಾಯಿತು.ಒಕ್ಕೂಟದ ಸದಸ್ಯರು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು

Exit mobile version