ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಂಚಿನಡ್ಕ ಮತ್ತು ಕೊಜಪ್ಪಾಡಿ ಕ್ರಾಸ್ ರಸ್ತೆಯ ಪಕ್ಕದಲ್ಲಿ ತ್ಯಾಜ್ಯದ ರಾಶಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.ರಾತ್ರಿ ವೇಳೆಗೆ ತ್ಯಾಜ್ಯವನ್ನು ಎಸೆಯುವುದು ಎಂದು ಸ್ಥಳೀಯರು ಆತಂಕದಿಂದ ಹೇಳಿದರು.
ಜೋರು ಮಳೆಗಾಲದಲ್ಲಿ ಗಬ್ಬು ವಾಸನೆ ಬರುತ್ತದೆ. ದಿನ ಬೆಳಿಗ್ಗೆ, ಸಂಜೆ ನಡೆದಾಡುವ ಜನರಿಗೆ ಹಾಗೂ ಪಕ್ಕದಲ್ಲಿರುವ ಮನೆಗಳಿಗೆ ತುಂಬಾ ತೊಂದರೆ ಆಗುತ್ತಿದೆ.ಇಲ್ಲಿ ತ್ಯಾಜ್ಯವನ್ನು ಹಾಕುವುದರಿಂದ ಬೀದಿ ನಾಯಿಗಳು ತ್ಯಾಜ್ಯವನ್ನು ರಸ್ತೆಯಲ್ಲಿ ಎಳೆದು ಹಾಕುತ್ತವೆ.ನಾಯಿಗಳ ಓಡಾಟದಿಂದ ವಾಹನ ಸವಾರರಿಗೂ ತುಂಬಾ ತೊಂದರೆ ಆಗುತ್ತದೆ.
ಆದುದರಿಂದ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.