ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ನಾರಾವಿಗೆ ಸರ್ಕಾರಿ ಬಸ್ ಕಲ್ಪಿಸಬೇಕು ಎಂಬ ಜನರ ಬೇಡಿಕೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪುತ್ತೂರು ವಿಭಾಗ ಧರ್ಮಸ್ಥಳ ಡಿಪೋದಿಂದ ನಾರಾವಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಆ.25ರಂದು ಧರ್ಮಸ್ಥಳದಿಂದ ಬೆಳಿಗ್ಗೆ 6.35ಕ್ಕೆ ನಾರಾವಿಗೆ ಬಸ್ ಹೊರಡಲಿದ್ದು 7:00 ಗಂಟೆಗೆ ಬೆಳ್ತಂಗಡಿಗೆ, 07:40ಕ್ಕೆ ನಾರಾವಿ ಬಸ್ ನಿಲ್ದಾಣಕ್ಕೆ ತಲುಪಲಿದೆ.ಈ ಮೂಲಕ ಶಕ್ತಿ ಯೋಜನೆಗೆ ಸರ್ಕಾರ ಮತ್ತಷ್ಟು ಬಲ ನೀಡಿದಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲ ಮಾಡಿಕೊಟ್ಟಿದೆ.
ನಾರಾವಿ ಕಡೆಯಿಂದ ಉಜಿರೆ ಕಾಲೇಜು ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಇತರರು ಸಂಚಾರದ ಅನಾನುಕೂಲತೆಯ ಬಗ್ಗೆ ಶಾಸಕರಿಗೆ ಕಳೆದ ಕೆಲವು ಸಮಯಗಳ ಹಿಂದೆ ಬಸ್ ಕಲ್ಪಿಸುವಂತೆ ವಿನಂತಿಸಿಕೊಂಡಿದ್ದರು.ಈ ಬಗ್ಗೆ ಶಾಸಕರು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರು ಅದಲ್ಲದೇ ಮಾಜಿ ಶಾಸಕರಾದ ವಸಂತ ಬಂಗೇರ ಕೂಡ ಜು.18 ರಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರ ಮೂಲಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಬಸ್ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದರು.