Site icon Suddi Belthangady

ಶಿಶಿಲ ಹಾಲು ಉತ್ಪಾದಕರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ

ಶಿಶಿಲ: ಇಲ್ಲಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸಂತೋಷ್ ಎ.ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಡಿ ಲಕ್ಷ್ಮೀಶ ಗೌಡ ಆಯ್ಕೆಯಾಗಿದ್ದಾರೆ, ಇನ್ನುಳಿದಂತೆ ಸದಸ್ಯರಾಗಿ ಈಶ್ವರಪ್ಪ ಗೌಡ, ಸರೋಜಾ ಬಿ ಸುಂದರ, ಸೇಸಮ್ಮ.ಕೆ, ಆನಂದ.ಡಿ, ಕೊರಗಪ್ಪ ಗೌಡ, ಭವಾನಿ, ಚಂದ್ರಶೇಖರ ಎಂ, ಶೇಖರ ಪುರುಷ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.ಆಯ್ಕೆ ಆದ ಎಲ್ಲಾ ಅಭ್ಯರ್ಥಿಗಳು ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.

ಚುನಾವಣಾ ಪ್ರಕ್ರಿಯೆ ನಡೆಸಲು ರಿಟರ್ನಿಂಗ್ ಆಫೀಸರ್ ಪ್ರತಿಮಾ ಬಿವಿ ಹಾಗೂ ಕಾರ್ಯದರ್ಶಿಯಾದ ಲಕ್ಷ್ಮೀಶ ಬಿ ಸಹಕರಿಸಿದರು.

Exit mobile version