Site icon Suddi Belthangady

ಸೌಜನ್ಯ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ನಾಗನ್ನ ಗೌಡ ಭೇಟಿ

ಧರ್ಮಸ್ಥಳ : 11 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಹಾಗೂ ಕೊಲೆಯಾದ ಸೌಜನ್ಯ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಆಗಸ್ಟ್ 20 ರಂದು ಸಂಜೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರಾದ ನಾಗನ್ನ ಗೌಡ ಭೇಟಿ ನೀಡಿದರು.

ಭೇಟಿ ನೀಡಿದ ಮೊದಲು ಕೊಲೆಯಾಗಿ ಪತ್ತೆಯಾದ ನೇತ್ರಾವತಿ ಮಣ್ಣಸಂಖ ಪ್ರದೇಶ ಪರಿಶೀಲನೆ ನಡೆಸಿ ಮತ್ತು ಸೌಜನ್ಯಳ ತಾಯಿ ಮತ್ತು ಮಾವನಿಂದ ಹಾಗೂ ಧರ್ಮಸ್ಥಳ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ನಂತರ ಸೌಜನ್ಯಳ ಪಾಂಗಾಳ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ನೀಡಿ ಬಳಿಕ ಘಟನೆಗಳ ಬಗ್ಗೆ ಮಾತುಕತೆ ನಡೆಸಿದರು.

ನಾಗನ್ನ ಗೌಡ ಜೊತೆಯಲ್ಲಿ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ, ಸಿಡಿಪಿಓ ಪ್ರಿಯಾ ಅಗ್ನಸ್ ಮತ್ತಿತರರು ಭಾಗಿಯಾಗಿದ್ದರು.

ಅಲ್ಲಿಂದ ನೇರ ಬೆಳ್ತಂಗಡಿ ಐಬಿ ಗೆ ಅಧಿಕಾರಿಗಳೊಂದಿಗೆ ನಡೆಯುವ ಸಭೆಗೆ ತೆರಳಿದರು.

Exit mobile version