ಪಟ್ಟೂರು: ಜೀವನವು ಚದುರಂಗ ಆಟವಿದ್ದಂತೆ. ಚದುರಂಗ ಆಟದಲ್ಲಿ ಹೇಗೆ ಒಂದೊಂದು ದಾಳವನ್ನು ಇಡುವಾಗಲೂ ಎಚ್ಚರಿಕೆಯಿಂದ ಇಡುತ್ತೇವೆಯೋ ಅಂತೇ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯೂ ಯೋಚನಾಭರಿವಾಗಿರಬೇಕು. ಆಟದಲ್ಲಿ ಸೋಲು ಗೆಲುವು ಸಹಜ.ಭಾರತಮಾತೆಯ ಮಕ್ಕಳೆಲ್ಲ ಒಂದೇ ಎನ್ನುವ ಭಾವನೆಯಿಂದ ಕ್ರೀಡಾ ಮನೋಭಾವದಿಂದ ಆಟ ಆಡಿದಾಗ ಉತ್ತಮ ಬಾಂಧವ್ಯ ಮೂಡಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಗ್ರಾಮೀಣ ಶಾಲೆಗಳ ಮೇಲ್ವಿಚಾರಕರಾದ ವೆಂಕಟರಮಣ ರಾವ್ ಮಂಕುಡೆ ನುಡಿದರು.
ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರಲ್ಲಿ ಗುರುವಾರ ನಡೆದ ದ.ಕ. ವಿದ್ಯಾಭಾರತಿ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಶ್ರೀಕೃಷ್ಣ ಹಿತ್ತಿಲು ಮಾತನಾಡುತ್ತಾ ನಮ್ಮ ಯೋಚನ ಶಕ್ತಿಗೆ ಪೂರಕವಾದ ಆಟ ಚೆಸ್. ಚೆಸ್ ನಲ್ಲಿ ಪ್ರತಿಯೊಂದು ದಾಳವನ್ನು ಇಡುವಾಗಲೂ ಹಲವು ಬಾರಿ ನಾವು ಯೋಚಿಸಬೇಕಾಗುತ್ತದೆ. ಸೀಮಿತ ಅವಧಿಯೊಳಗೆ ದಾಳವನ್ನು ಇಟ್ಟುಕೊಂಡು ಪಂದ್ಯವನ್ನು ಗೆಲ್ಲುವುದೇ ಸವಾಲು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ದ.ಕ ಜಿಲ್ಲಾ ಖೇಲ್ ಖುದ್ ಪ್ರಮುಖ ಕರುಣಾಕರ್, ಜಿಲ್ಲಾ ದೈಹಿಕ ಶಿಕ್ಷಣ ಪ್ರಮುಖ ಪುರುಷೋತ್ತಮ, ಶಾಲಾ ಮುಖ್ಯೋಪಧ್ಯಾಯ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟ ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟದ್ದು ಎಲ್ಲರ ಮೆಚ್ಚುಗೆಗೆ ಪಾತ್ರಯಿತು.. ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಯ ಅಡಿಯಲ್ಲಿ ಬರುವ 19 ಶಾಲೆಗಳ 196 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ವಿಭಾಗಗಳಲ್ಲಿ ಒಟ್ಟು ಏಳು ಹಂತದಲ್ಲಿ ಸ್ಪರ್ಧೆಗಳು ನಡೆದಿದ್ದು ತೀರ್ಪುಗಾರರಾಗಿ ಸೌಂದರ್ಯ, ನಯನ ಕುಮಾರ್, ಉಮಾನಾಥ್ಪಂದ್ಯಾಟ ನಡೆಸಿಕೊಟ್ಟರು.
ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿ, ಚಂದ್ರಶೇಖರ ಶೇಟ್ ವಂದಿಸಿದರು. ಶಾಲಾ ನಾಯಕಿ ಸಂಧ್ಯಾ ನಿರೂಪಿಸಿದರು.