ಧರ್ಮಸ್ಥಳ: ಶಾಂತಿವನ ಟ್ರಸ್ಟ್ (ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇವರ ಸಹಯೋಗದಲ್ಲಿ ಜ್ಞಾನ ಶರಧಿ ಮತ್ತು ಜ್ಞಾನ ವಾರದಿ 2023 ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ 20 ನೇ ವರ್ಷದ ರಾಜ್ಯ ಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ ಧರ್ಮಸ್ಥಳ ಮಹೋತ್ಸವ ಸಭಾ ಭವನದಲ್ಲಿ ಆ.19 ರಂದು ಜರಗಿತು.
ಮೈಸೂರಿನ ಖ್ಯಾತ ವಾಗ್ಮಿ ಪ್ರೊ.ಕೃಷ್ಣೆ ಗೌಡ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಚಲನಚಿತ್ರ ನಟ ಸಿಹಿಕಹಿ ಚಂದ್ರು ಅಂಚೆ-ಕುಂಚ ವಿಜೇತರನ್ನು ಪುರಸ್ಕಾರ ಮಾಡಿದರು.ಮುಖ್ಯ ಅತಿಥಿಗಳಾಗಿ ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿ ಇಲಾಖೆಯ ನಿರ್ದೇಶಕಿ ಸುಮಂಗಲ, ಧರ್ಮಸ್ಥಳ ಹೇಮಾವತಿ ವಿ.ಹೆಗ್ಗಡೆ ಭಾಗವಹಿಸಿ ಪ್ರಶಸ್ತಿ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಕುಂಚ-ಗಾನ-ನೃತ್ಯ ವೈಭವ: ಕುಂಚ-ಶ್ರೀ ಬಾಬಲೇಶ್ವರ, ದಾವಣಗೇರೆ ಗಾನ ವಿದುಷಿ ಶ್ರೇಯ ಕೊಳತ್ತಾಯ ಮತ್ತು ಸಂಗಡಿಗರು, ನೃತ್ಯ-ಕರ್ನಾಟಕ ಕಲಾಶ್ರೀ ವಿದೂಷಿ ಶಾರದಮಣಿ ಶೇಖರ್, ನಿದೇಶಕರು ಸನಾತನ ನಾಟ್ಯಾಲಯ, ಮಂಗಳೂರು ಇವರ ಶಿಷ್ಯವೃಂದದವರಿಂದ ನಡೆಯಿತು.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಟಿ.ಸೀತಾರಾಮ ತೋಳ್ಳಾಡಿತ್ತಾಯ ವಂದಿಸಿದರು.
ವಿಜೇತರ ಪಟ್ಟಿಯನ್ನು ರಾಜ್ಯ ಯೋಗ ಸಂಘಟಕ ಶೇಖರ್ ಕಡ್ತಲ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಕಾರ್ಕಳ ಶ್ರೀ ಭುವನೇಂದ್ರ ಪ್ರೌಢ ಶಾಲೆ ಶಿಕ್ಷಕ ಗಣೇಶ್ ಮಾಡಿದರು.ಕಾರ್ಯಕ್ರಮದಲ್ಲಿ ಯೋಜನೆಯ ಕಾರ್ಯನಿರ್ವಾಹಕ ಡಾ. ಎಲ್. ಹೆಚ್. ಮಂಜುನಾಥ್, ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ, ಶಾಂತಿವನ ಟ್ರಸ್ಟ್ ನ ಡಾ. ಪ್ರಶಾಂತ್ ಶೆಟ್ಟಿ, ಡಾ. ಶಿವಪ್ರಸಾದ್ ಶೆಟ್ಟಿ, ಧರ್ಮಸ್ಥಳ ಕ್ಷೇತ್ರದ ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿಜೇತ ಸ್ಪರ್ಧಿಗಳು ಹಾಜರಿದ್ದರು