ತೆಂಕಕಾರಂದೂರು: ಪೆರೋಡಿತ್ತಾಯಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಹಾಲು ಉತ್ಪಾದಕರ ಸಭಾ ಭವನದಲ್ಲಿ ಆ.19ರಂದು ಸಂಘದ ಅಧ್ಯಕ್ಷ ಎ.ಅರ್ಕಕೀರ್ತಿ ಹೆಗ್ಡೆಯವರ ಅದ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷರಾದ ರಮಾನಾಥ ರೈ, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾರವರು ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ತಿಮ್ಮಪ್ಪ ಪೂಜಾರಿ, ವಿಶ್ವನಾಥ್, ರೈಮಂಡ್ ವೇಗಸ್, ಕೆ. ಶರತ್ ಕುಮಾರ್, ಪ್ರದೀಪ್ ಕುಮಾರ್, ಗಿರೀಶ್ ನಾಯ್ಕ್, ಶೇಖರ, ಗೋಪಾಲ ಶೆಟ್ಟಿ, ಲಲಿತಾ, ಪ್ರವೀಣ ಕುಮಾರಿ ಉಪಸ್ಥಿತರಿದ್ದರು.
ನಿರ್ದೇಶಕಿ ಪ್ರವೀಣ ಕುಮಾರಿ ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾನಂದ ಕಾರ್ಯಕ್ರಮ ನಿರೂಪಿಸಿ ವರದಿ, ಲೆಕ್ಕ ಪತ್ರ ಮಂಡಿಸಿ ವಂದಿಸಿದರು.ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಭಿವೃದ್ಧಿ ಬಗ್ಗೆ ಸಂಘದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.ಸಂಘದ ಸದಸ್ಯರ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸುಧೀಕ್ಷ, ವಿಶಾಕ್ , ವಿಶ್ರುತ, ಸಮೀಕ್ಷಾ ಕೀರ್ತನ್ ಕುಮಾರ್, ಅಶ್ವಿತಾ ಕುಮಾರಿ, ಬಿಂದು ಜಿ.ಟಿ, ನವ್ಯ ಇವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಅತೀ ಹೆಚ್ಚು ಹಾಲು ಪೂರೈಸಿದ ಪ್ರಥಮ ಪ್ರಶಾಂತ್ ಪೇರಾಜೆ, ದ್ವಿತೀಯ ಗೋಪಾಲ ಶೆಟ್ಟಿ, ತೃತೀಯ ವನಿತಾ ಇವರನ್ನು ಗೌರವಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ದೇವಯ್ಯ ನಾಯ್ಕ ಅಶ್ವತ್ ಪಲ್ಕೆ, ಸುಧಾಕರ್ ಪೂಜಾರಿ ಹೊಸಮನೆ, ಶ್ಯಾಮ್ ಭಟ್ ಇವರಿಗೆ ಆರ್ಥಿಕ ನೆರವು ವಿತರಿಸಲಾಹಿತು.2022-23ನೇ ಸಾಲಿನಲ್ಲಿ 180 ದಿನ ಹಾಲು ಸರಬರಾಜು ಮಾಡಿದ ಸಂಘದ ಸದ್ಯಸ್ಯರಿಗೆ ಲವಣ ಮಿಶ್ರಣ ಮತ್ತು ಸ್ಟೀಲ್ ಪಾತ್ರೆ ವಿತರಿಸಲಾಯಿತು.ಹಾಗೂ ಸದಸ್ಯರಿಗೆ ಲೀಟರ್ ಒಂದಕ್ಕೆ 49 ಪೈಸೆ ಬೋನಸ್ ಮತ್ತು 6% ಡಿವಿಡೆಂಡ್ ಘೋಷಿಸಲಾಯಿತು.