Site icon Suddi Belthangady

ಎಸ್‌ಡಿಎಂ ಐ.ಟಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಗೆ ಬಹುಮಾನ

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿನಿ ಭಟ್, ಅನ್ವಿತಾ, ಅನುಶ್ರೀ ಮತ್ತು ದಿಶಾ ಶೆಟ್ಟಿ ತಂಡ ಅಭಿವೃದ್ದಿ ಪಡಿಸಿ ಪ್ರಸ್ತುತ ಪಡಿಸಿದ Phishing Website Detection Plugin Using Machine Learning ಪ್ರಾಜೆಕ್ಟ್ ಗೆ Karnataka State Council for Science and Technology (KSCST) ಆಯೋಜಿಸಿದ್ದ ರಾಜ್ಯಮಟ್ಟದ ನಲವತ್ತಾರನೇ ಸರಣಿಯ ಇಂಜಿನಿಯರಿಂಗ್ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್ ಪಡೆದುಕೊಂಡಿರುತ್ತದೆ.ಪ್ರಾಜೆಕ್ಟ್ ತಯಾರಿಯಲ್ಲಿ ಕಂಪ್ಯೂಟರ್ ಸೈನ್ಸ್‌ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರದೀಪ್ G. S ಮಾರ್ಗದರ್ಶನ ನೀಡಿರುತ್ತಾರೆ.

ವಿದ್ಯಾರ್ಥಿಗಳು ಆವಿಷ್ಕರಿಸಿದ ಪ್ರಾಜೆಕ್ಟ್, ನಕಲಿ ವೆಬ್ ಸೈಟ್ (fake websites ) ಮತ್ತು ಅಂತರ್ಜಾಲವಂಚನೆಯನ್ನು (online fraud ) ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್‌ ಅಭಿನಂದಿಸಿರುತ್ತಾರೆ.

Exit mobile version