Site icon Suddi Belthangady

ಕಲ್ಮಂಜ: ನಿಡಿಗಲ್ ಬೈಲು ನಿವಾಸಿ ರಾಜು ಮಡಿವಾಳ ನಿಧನ

ಕಲ್ಮಂಜ: ಕಲ್ಮಂಜ ಗ್ರಾಮದ ನಿಡಿಗಲ್ ಬೈಲು ನಿವಾಸಿ ರಾಜು ಮಡಿವಾಳ (71 ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.19 ರಂದು ನಿಧನರಾದರು.

ಮೃತರು ವಿವಿಧ ಕಡೆಗಳಲ್ಲಿ ನಡೆಯುವ ಜಾತ್ರ ಸಂದರ್ಭದಲ್ಲಿ ದೊಂದಿಯಿಡುವುದರಲ್ಲಿ ಪರಿಣತರಾಗಿ ಜನಾನುರಾಗಿಯಾಗಿದ್ದರು.

ಪ್ರಗತಿಪರ ಕೃಷಿಕರು ಆಗಿದ್ದು.ಕೆಲ ಸಮಯದಿಂದ ಅಸೌಖ್ಯದಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.

ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯರು, ಸಹೋದರರು, ಸಹೋದರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version