
ಮೇಲಂತಬೆಟ್ಟು: ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಮೇಲಂತಬೆಟ್ಟು ಸಮುದಾಯ ಭವನದಲ್ಲಿ ಆ.18ರಂದು ನಡೆಯಿತು.
ಸಂಘದ ಅಧ್ಯಕ್ಷ ಚಂದ್ರರಾಜ್ ಯಂ.ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾದ ಭೋಜ ಪೂಜಾರಿ, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾರವರು ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಲ್ಲಿಕಾ ಜಿ., ಜಾನ್ ಪಿಂಟೊ, ಗೀತಾ ಎಸ್ ಶೆಟ್ಟಿ, ಧರ್ಣಪ್ಪ ಬಂಗೇರ, ಸತ್ಯ ಶಂಕರ್ ಭಟ್ ಯಂ, ಮೋಹನ್ ಸಪಲ್ಯ, ನಳಿನಾಕ್ಷಿ ಎನ್., ಗೀತಾ ಆರ್ ಸುವರ್ಣ, ವಾಸು ಕೆ., ಪುಷ್ಪಾ, ಇಜಿದೋರ್ ರೊಡ್ರಿಗಸ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಚಂದ್ರರಾಜ್ ಸ್ವಾಗತಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವರದಿ ಲೆಕ್ಕ ಪತ್ರ ಮಂಡಿಸಿದರು.ನಿರ್ದೇಶಕರಾದ ಮೋಹನ್ ಸಪಲ್ಯ ವಂದಿಸಿದರು.
ಸಿಬ್ಬಂದಿಗಳಾದ ಸೀತಾ, ಚೇತನ್, ದೀಕ್ಷಿತ್, ವಿನ್ಸೆಂಟ್ ರೊಡ್ರಿಗಸ್, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಭಿವೃದ್ಧಿ ಬಗ್ಗೆ ಸಂಘದ ಸದಸ್ಯ ಸಚಿನ್ ಕುಮಾರ್ ನೂಜೋಡಿ ಸಲಹೆ ಸೂಚನೆಗಳನ್ನು ನೀಡಿದರು.ಸಂಘದ ಸದಸ್ಯರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಿತೇಶ್ ಶೆಟ್ಟಿ, ಧನ್ಯಶ್ರೀ, ಶೃಷ್ಟಿ ಇವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಅತೀ ಹೆಚ್ಚು ಹಾಲು ಪೂರೈಸಿದ ಪ್ರಥಮ ಜಾನ್ ಪಿಂಟೊ, ದ್ವಿತೀಯ ಬೇಬಿ, ತೃತೀಯ ರಾಜೇಶ್ ಮೊನಿಸ್ ಇವರನ್ನು ಗೌರವಿಸಲಾಯಿತು.