ಬೆಳ್ತಂಗಡಿ: ಕಾಜೂರು ರಹ್ಮಾನಿಯ ಶಿಕ್ಷಣ ಸಮೂಹ ಸಂಸ್ಥೆಗಳ ವಠಾರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಿಕ್ಷಣ ಸಂಸ್ಥೆಗಾಗಿ ನೂತನವಾಗಿ ಖರೀದಿಸಿದ ಶಾಲಾ ವಾಹನದ ಉದ್ಘಾಟನೆಯು ಅದ್ದೂರಿಯಾಗಿ ನಡೆಯಿತು.
ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಕೆ ಯು ಇಬ್ರಾಹಿಂ ದ್ವಜಾರೋಹಣಗೈದರು.ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಕೈಲಿ ತಂಙಳ್ ಸಂದೇಶ ನೀಡಿದರು.ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಹಾಗೂ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕ ಕೆ ಎಂ ಸಿದ್ದೀಕ್ ಮೋಂಟುಗೋಳಿ ಶುಭಕೋರಿದರು.
ದರ್ಗಾ ಸಮಿತಿ ಪ್ರ.ಕಾರ್ಯದರ್ಶಿ ಹಾಗೂ ರಾಹ ಎಜ್ಯುಕೇಶನಲ್ ಟ್ರಸ್ಟ್ ಚೇರ್ಮನ್ ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್, ದರ್ಗಾ ಸಮಿತಿ ಕೋಶಾಧಿಕಾರಿ ಮಹಮ್ಮದ್ ಕಮಾಲ್, ರಾಹ ಎಜ್ಯುಕೇಶನ್ ಸಂಚಾಲಕ ಅಶ್ಫಾಕ್, ಫೈನಾನ್ಸ್ ಸೆಕ್ರೆಟರಿ ಆಸಿಫ್ ಜೆ.ಎಚ್, ಸದರ್ ಉಸ್ತಾದ್ ಜಮಾಲ್ ಲತೀಫಿ, ಆರ್.ಜೆ.ಎಂ ಕಾಜೂರು ಮಾಜಿ ಅಧ್ಯಕ್ಷ ಬಿ ಎ ಯೂಸುಫ್ ಶರೀಫ್ ಹಾಗೂ ದರ್ಗಾ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರುಗಳು ಸೇರಿದಂತೆ ಜಮಾಅತರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಎಸ್ ವೈ ಎಸ್, ಅಂಗ ಸಂಸ್ಥೆಗಳಾದ ಸ್ವಲಾತ್ ಕಮಿಟಿ, ದಫ್ ಸಮಿತಿ, ಕೆ.ಡಿ.ಸಿ ಪದಾಧಿಕಾರಿಗಳು ಮತ್ತು ಸದಸ್ಯರು, ಕಾಜೂರು, ಕುಕ್ಕಾವು, ದಿಡುಪೆ ಮತ್ತು ಜಿ ನಗರ ಮದ್ರಸಗಳ ಆಡಳಿತ ಸಮಿತಿ, ಶಾಲಾ ಶಿಕ್ಷಕ-ರಕ್ಷಕ ಸಮಿತಿ ಮತ್ತು ಮದ್ರಸ ಶಿಕ್ಷಕ-ರಕ್ಷಕ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಭಾಗವಹಿಸಿದ್ದರು.ಮದ್ರಸ, ದರ್ಸ್, ಪ್ರೌಢಶಾಲೆ, ಪಬ್ಲಿಕ್ ಸ್ಕೂಲ್, ಶರೀಅತ್ ಕಾಲೇಜು, ಪಿಯುಸಿ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.