ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಭಾರತಿ (ರಿ) ಕನ್ಯಾಡಿ ಬೆಳ್ತಂಗಡಿ ಇದರ ಕಲಾವಿದ ತಂಡದಿಂದ ಆ.15ರಂದು ಕಳ್ಮಂಜ ಗ್ರಾಮದ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ನಚಿಕೇತ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ವಾಸುದೇವ ಆಚಾರ್ಯ ಉಜಿರೆ ಹಾಗು ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಕರಿಸಿದರು.ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಯಮನಾಗಿ ಸುರೇಶ ಕುದ್ರೆನ್ತಯ ಉಜಿರೆ, ನಚಿಕೇತನಾಗಿ ಹರಿದಾಸ್ ಗಾಂಭೀರ ಧರ್ಮಸ್ಥಳ, ವಾಜಶ್ರವನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗು ಚಿತ್ರಗುಪ್ತನಾಗಿ ಶಶಿಧರ ಕನ್ಯಾಡಿ ಪಾತ್ರ ನಿರ್ವಹಿಸಿದ್ದರು.ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿ, ಆಶೀರ್ವದಿಸಿದರು.