Site icon Suddi Belthangady

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿದ ಗಮ್ಮತ್

ಬೆಳ್ತಂಗಡಿ : ಇಲ್ಲಿಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕೃತಿ ಹಾಗೂ ಆಟಿ ತಿಂಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ‘ಆಟಿದ ಗಮ್ಮತ್ತ್’ ಕಾರ್ಯಕ್ರಮವನ್ನು ಆ.12ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೈವನರ್ತಕ ಹಾಗೂ ಉಜಿರೆ ಎಸ್.ಡಿ. ಎಂ.ಐಟಿ ಕಾಲೇಜಿನ ಪ್ರಾಧ್ಯಾಪಕ ಡಾ. ರವೀಶ್ ಪಡುಮಲೆ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟಿ ತಿಂಗಳಲ್ಲಿ ಹಿರಿಯರು ಸಾಗಿಸುತ್ತಿದ್ದ ಜೀವನ ಮತ್ತು ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಆಹಾರಗಳ ಬಗ್ಗೆ ತಿಳಿಸಿದರು.

ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ತುಳುನಾಡಿನ ಸಂಸ್ಕೃತಿ ಸಾರುವ ಹಳೆಯ ವಸ್ತುಗಳ ಪ್ರದರ್ಶನ, ಆಟಿ ತಿಂಗಳಿನ ವಿಶೇಷ ಆಹಾರ ವಸ್ತುಗಳ ಪ್ರದರ್ಶನ, ಶಾಲೆಯ ಗದ್ದೆಯಲ್ಲಿ ಹಗ್ಗ ಜಗ್ಗಾಟ, ಲೆಮನ್ ಮತ್ತು ಸ್ಪೂನ್ ಓಟ ಹಾಗೂ ಅಡಿಕೆ ಹಾಳೆ ಎಳೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಾದ ಚಿನ್ಮಯ್ ಪ್ರಾರ್ಥಿಸಿ, ಅನುಶ್ರೀ ಸ್ವಾಗತಿಸಿ, ನಿಧಿ ವಂದಿಸಿದರು. ವಿದ್ಯಾರ್ಥಿನಿ ನಿಧಿ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Exit mobile version